Breaking News

ನನ್ನ ಫೋನ್​ ಟ್ಯಾಪ್​ ಆಗಿಲ್ಲ, ಸಿಡಿಆರ್​ ತೆಗೆದುಕೊಳ್ಳುತ್ತಿದ್ದಾರೆ” ಎಂದ ಎಂ.ಬಿ ಪಾಟೀಲ! ಏನಿದು ಸಿಡಿಆರ್?

Spread the love

ವಿಜಯಪುರ‌: ನನ್ನ ಫೋನ್ ಟ್ಯಾಪ್ ಆಗಿಲ್ಲ. ಫೋನ್ ಸಿಡಿಆರ್ ತಗೆದುಕೊಳ್ಳುತ್ತಿದ್ದಾರೆ ಎಂದು ವಿಜಯಪುರ ನಗರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ ಹೇಳಿದರು.

ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಸಿಡಿಆರ್ ತೆಗೆಯುವ ಚಾಳಿ ಇದೆ.

ಆದ್ರೇ, ಯಾರ ಹೆಸರು ಹೇಳೋದಿಲ್ಲ. ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಆದ್ರೇ, ಸರ್ಕಾರ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ. ಫೋನ್ ಸಿಡಿಆರ್ ನನ್ನ ವಿರೋಧಿಗಳು ಮಾಡುತ್ತಿದ್ದಾರೆ. ಇದು ಅನುಮಾನ ಅಲ್ಲ, ಪಕ್ಕಾ ಮಾಹಿತಿ ಇದೆ ಎಂದರು. ಇನ್ನು ಚುನಾವಣೆಯಲ್ಲಿ ಖಾಸಗಿ ಮಾಹಿತಿ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವಾಸಾರ್ಹ ತಿಳಿದುಕೊಂಡು ಪತ್ರ ಬರೆದಿದ್ದೇನೆ. ಕೆಲವೊಂದು ಅಧಿಕಾರಿಗಳು ಆಮಿಷಕ್ಕಾಗಿ ಸಿಡಿಆರ್ ಕೊಡುವವರು ಇರ್ತಾರೆ. ಅದಕ್ಕಾಗಿ ಬಿಜೆಪಿ ಆಗ್ಲಿ ಯಾರದು ಆಗಬಾರದು ಎಂದರು. ಇನ್ನು

ಸಿದ್ದರಾಮಯ್ಯ ಎಲ್ಲ ನಿಂತರು ಗೆಲುತ್ತಾರೆ. ಬಾದಾಮಿ, ಕೊಲ್ಹಾರ, ವರುಣಾಗೂ ಗೆಲ್ಲುತ್ತಾರೆ. 40 ಸಾವಿರ ಮತದಿಂದ ಗೆಲ್ಲುತ್ತಾರೆ. ಅವರಲ್ಲಿ ಅಂತಹ ಶಕ್ತಿ ಇದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಧ್ಯ ಆಗಿರುವ ಮಾತು ಕಥೆ ಗೊತ್ತಿಲ್ಲ. ಯುಗಾದಿ ದಿನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುತ್ತದೆ.
ಯುಗಾದಿಗೆ ಸಿಹಿ ಸುದ್ದಿ ನೀಡುತ್ತೇವೆ ಎಂದರು.

ಸಿಡಿಆರ್​ ಎಂದರೆ ಕಾಲ್​ ಡೀಟೇಲ್ ರೆಕಾರ್ಡಿಂಗ್​ ಎಂದರ್ಥ. ಇದು ಎಲ್ಲಾ ದೂರಸಂಪರ್ಕ ಸಾಧನಗಳ ಮೂಲಕ ಹಾದುಹೋಗುವ ಎಲ್ಲಾ ದೂರವಾಣಿ ಕರೆಗಳ ವಿವರವಾದ ದಾಖಲೆಯಾಗಿದೆ. ಇದನ್ನು ಬಳಸಿ ಓರ್ವ ವ್ಯಕ್ತಿ ಯಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನುವುದನ್ನು ಕಂಡು ಹಿಡಿಯಬಹುದು. ಇದರಿಂದಾಗಿ ಎದುರಾಳಿ ಏನೆಲ್ಲಾ ಪ್ಲಾನಿಂಗ್​ ಮಾಡಬಹುದು ಎಂದು ಲೆಕ್ಕ ಹಾಕಬಹುದಾಗಿದೆ.


Spread the love

About Laxminews 24x7

Check Also

ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

Spread the loveಹಾವೇರಿ : ಆರ್​​ಟಿಸಿ ದುರಸ್ತಿ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ