Breaking News

ನಾಳೆ ಇಡೀ ದಿನ ಆಟೋ ಸೇವೆ ಬಂದ್ ಆಗುವ ಸಾಧ್ಯತೆ?

Spread the love

ಬೆಂಗಳೂರು ಆಟೊರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಬೆಂಗಳೂರಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾರ್ಚ್‌ 20ರಂದು ಆಟೋ ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಇದರಿಂದ ನಾಳೆ ಸೋಮವಾರ ಇಡೀ ದಿನ ಸಾರ್ವಜನಿಕರಿಗೆ ಆಟೋ ಸೇವೆ ಸಿಗುವುದು ಅನುಮಾನ ಮೂಡಿಸಿದೆ.

 

ಭಾನುವಾರ ಸಂಜೆ ವೇಳೆಗೆ ಸಿಎಂ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡದಿದ್ದರೇ ಸೋಮವಾರ ಆಟೋ ಸೇವೆ ಬಂದ್ ಮಾಡುವುದು ನಿಶ್ಚಿತ ಎಂದು ಒಕ್ಕೂಟ ಎಚ್ಚರಿಸಿದೆ.

‘ಸಾರಿಗೆ ಇಲಾಖೆ ಮತ್ತು ಸಾರಿಗೆ ಸಚಿವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಆಯಪ್‌ ಆಧಾರಿತ ಅನಧಿಕೃತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಆಟೊ ಚಾಲಕರ ಸಂಪಾದನೆಯನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಆಟೊ ಚಾಲಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಯೋಜನೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ’ ಎಂದು ಒಕ್ಕೂಟ ಆರೋಪಿಸಿದೆ.

‘ಅಕ್ರಮ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಬೇಕೆಂದು ಇದೇ 17ರಿಂದ ಮೂರು ದಿನಗಳವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ. ಪ್ರತಿಭಟನೆಯ ಸಂಕೇತವಾಗಿ ಆ ಮೂರು ದಿನಗಳಲ್ಲಿ ಎಲ್ಲ ಆಟೊಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಲಾಗು
ವುದು. ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಬೈಕ್‌ ಟ್ಯಾಕ್ಸಿ ಗಳನ್ನು ಈಗಾಗಲೇ ಬಹಿಷ್ಕರಿಸಲಾಗಿದೆ. ಚುನಾವಣೆಗೂ ಮುನ್ನ ಇವುಗಳನ್ನು ನಿಯಂತ್ರಿಸದಿದ್ದರೇ ಚುನಾವಣೆಯನ್ನೇ ಬಹಿಷ್ಕರಿಸಲಾಗುವುದು’ ಎಂದು ಒಕ್ಕೂಟ ಆರೋಪಿಸಿದೆ.

ಬೆಂಗಳೂರಿನಲ್ಲಿ 21 ಆಟೊ ಚಾಲಕರ ಸಂಘಟನೆಗಳಿದ್ದು, 2.10 ಲಕ್ಷ ಆಟೊಗಳಿವೆ.


Spread the love

About Laxminews 24x7

Check Also

ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ…

Spread the love ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ