Breaking News

ಭಾರಿ ಗಾತ್ರದ ಮೂಲಂಗಿ ಬೆಳೆದ ರೈತ; ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ!

Spread the love

ಹಾರಾಷ್ಟ್ರ: ರೈತರೊಬ್ಬರು ತಮ್ಮ ಹೊಲದಲ್ಲಿ ಮೂಲಂಗಿಯನ್ನು ಬೆಳೆದಿದ್ದಾರೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ. ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ನೀರಿನ ಕೊರತೆಯಿಂದ ನಿತ್ಯ ಬರಗಾಲ ಎದುರಿಸುತ್ತಿದ್ದರೂ ಮಹಾರಾಷ್ಟ್ರದ ಬೀಡು ಜಿಲ್ಲೆಯ ರೈತರು ಆಧುನಿಕ ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ.

 

ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದ ರೈತ. ಇವರು ಬೆಳೆದ ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ ತೂಗುತ್ತಿವೆ.

 

ಸಾಮಾನ್ಯವಾಗಿ ಬೆಳೆಯುವ ಮೂಲಂಗಿಗಳು ಕಾಲು ಕೆಜಿಯಿಂದ ಗರಿಷ್ಠ ಎಂದರೆ 1 ಕೆ.ಜಿ.ಯವರೆಗೆ ತೂಗಬಹುದು. ಆದರೆ ಈ ರೈತ ಬೆಳೆದಿರುವ ಮೂಲಂಗಿ ತಲಾ 5 ಕೆ.ಜಿ ತೂಗುತ್ತಿವೆ. ಒಟ್ಟು ಮೂಲಂಗಿಗಳಲ್ಲಿ 15 ಮೂಲಂಗಿಗಳು 5 ಕೆ.ಜಿಗಿಂತ ಹೆಚ್ಚು ತೂಕವನ್ನು ಹೊಂದಿದ್ದು, ಸಾಮಾನ್ಯ ತೂಕದ ವ್ಯಾಪ್ತಿಯನ್ನು ಮೀರಿದೆ. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಶೇಂಗಾದೊಂದಿಗೆ ಮೂಲಂಗಿ ನಾಟಿ ಮಾಡಿ ಪ್ರಯೋಗ ಮಾಡಿ ಈ ಸಾಧನೆ ಮಾಡಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ