Breaking News

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ₹15ರಿಂದ ₹20ವರೆಗೆ ಹೆಚ್ಚಳ

Spread the love

ಬೆಂಗಳೂರು: ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ₹15ರಿಂದ ₹20ರವರೆಗೆ ಹೆಚ್ಚಳ ಮಾಡಿದೆ.

ಟೋಲ್ ಶುಲ್ಕ ಸರಿದೂಗಿಸಲು ಕರ್ನಾಟಕ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ ₹15, ರಾಜಹಂಸ ಬಸ್‌ ಪ್ರಯಾಣ ದರದಲ್ಲಿ ₹18, ಐರಾವತ ಸೇರಿ ಮಲ್ಟಿ ಆಯಕ್ಸೆಲ್ ಬಸ್‌ಗಳ ಪ್ರಯಾಣ ದರದಲ್ಲಿ ₹20 ಹೆಚ್ಚಳ ಮಾಡಲಾಗಿದೆ.

ಎಕ್ಸ್‌ಪ್ರೆಸ್ ಹೈವೆಯಲ್ಲಿ ಪ್ರಯಾಣಿಸುವ ಬಸ್‌ಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಎಕ್ಸ್‌ಪ್ರೆಸ್‌ ವೇನ ಮೊದಲ ಹಂತದ ಬೆಂಗಳೂರು-ನಿಡಘಟ್ಟ ನಡುವಿನ ಕಣಿಮಿಣಿಕೆ ಟೋಲ್ ಮೂಲಕ ಸಂಚರಿಸುವ ಬಸ್‌ಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದೆ.

 

 

ಖಾಸಗಿ ಬಸ್ ದರ ಸಹ ₹15-₹20ರವರೆಗೆ ಹೆಚ್ಚಳವಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ