ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತವಾಗಿರುವ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು ವೈದ್ಯರು ಆಂಜಿಯೋಪ್ಲಾಸ್ಟ್ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಸದಾ ಫಿಟ್ ಆಗಿರುವ ಸುಶ್ಮಿತಾ ಸೇನ್ ಅವರ ಹೃದಯಾಘಾತ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸದ್ಯಕ್ಕೆ ತಾವು ಆರಾಮವಾಗಿರುವುದಾಗಿ ಸುಶ್ಮಿತಾ ಸೇನ್ ಹೇಳಿದ್ದಾರೆ.
ತಮ್ಮ ದೈಹಿಕ ಆರೋಗ್ಯಕ್ಕೇ ಹೆಚ್ಚು ಒತ್ತು ನೀಡುವ ಸುಶ್ಮಿತಾ ಸೇನ್ ಅವರು ತಮ್ಮ ಫಿಟ್‌ನೆಸ್‌ನಿಂದಾಗಿ ಹಲವಾರು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ.
ʻನಿನ್ನ ಹೃದಯವನ್ನು ಖುಷಿಯಾಗಿ ಮತ್ತು ಧೈರ್ಯದಿಂದಿಡು. ಆಗ ಅದು ನಿನಗೆ ಅತ್ಯಂತ ಅವಶ್ಯಕತೆಯಿದ್ದಾಗ ನಿನ್ನ ಜೊತೆಗಿರುತ್ತದೆʼ ಎಂದು ಸೇನ್ ತಮ್ಮ ತಂದೆ ಅವರಿಗೆ ಹೇಳಿದ್ದ ಮಾತಗಳನ್ನು ನೆನಪಿಸಿಕೊಂಡಿದ್ದಾರೆ. ʻನಾನು ಎರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ವೈದ್ಯರು ಆಂಜಿಯೋಪ್ಲಾಸ್ಟ್ ಮಾಡಿ, ಸ್ಟಂಟ್ ಅಳವಡಿಸಿದ್ದಾರೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ಈ ಪೋಸ್ಟ್ ನನ್ನ ಆರೋಗ್ಯ ಸುಧಾರಿಸಿದೆ ಎಂಬ ಶುಭಸುದ್ದಿಯನ್ನು ನಿಮಗೆ ತಿಳಿಸಲು ಹಂಚಿಕೊಂಡಿದ್ದೇನೆ. ಎಲ್ಲವೂ ಚೆನ್ನಾಗಿದೆ. ನಾನು ಮತ್ತೆ ಮುಂದಿನ ಜೀವನಕ್ಕೆ ತಯಾರಾಗಿದ್ದೇನೆ. ದೇವರು ದೊಡ್ಡವನುʼ ಎಂದು ಅವರು ಬರೆದುಕೊಂಡಿದ್ದಾರೆ.
Laxmi News 24×7