Breaking News

ಆ ಬ್ರ್ಯಾಂಡ್‌ ನ ಬಿಯರ್‌ ಎಲ್ಲಾ ಕಡೆ ಸಿಗುವಂತೆ ಮಾಡಿ: ಜಿಲ್ಲಾಧಿಕಾರಿಗೆ ಪತ್ರ ಬರೆದ ವ್ಯಕ್ತಿ

Spread the love

ಹೈದರಾಬಾದ್: ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲು ಸರ್ಕಾರದ ಪ್ರತಿನಿಧಿಗಳು ನಾನಾ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ ಸೇರಿದಂತೆ ಸರ್ಕಾರ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಲು ಗ್ರಾಮ ವಾಸ್ತವ್ಯದಂಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ.

 

ಇಲ್ಲೊಬ್ಬ ಜಿಲ್ಲಾಧಿಕಾರಿಕರಿಗೆ ಬರೆದಿರುವ ಪತ್ರ ಸುದ್ದಿಯಾಗಿದೆ. ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಬಿ.ರಾಜೇಶ್ ಎಂಬಾತ ಜಿಲ್ಲಾಧಿಕಾರಿಗೆ ಪತ್ರ ಬರೆದು, ತಾನು ಕುಡಿಯುವ ಮದ್ಯದ ಬ್ರ್ಯಾಂಡ್‌ ನಮ್ಮ ಊರಿನಲ್ಲಿ ಸಿಗುತ್ತಿಲ್ಲ. ಅದನ್ನು ಎಲ್ಲಾ ಕಡೆ ಅದು ಸಿಗುವಂತೆ ಮಾಡಿ ಎಂದು ಬರೆದು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳುʼಪ್ರಜಾವಾಣಿʼ ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ವೇಳೆ ರಾಜೇಶ್‌ ಅವರ ಅರ್ಜಿಯನ್ನು ನೋಡಿದ್ದಾರೆ. ಊರಿನ ಜನರು ಕಳಪೆ ಗುಣಮಟ್ಟದ ಮದ್ಯವನ್ನು ಸೇವಿಸಿ, ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಗುಣಮಟ್ಟದ ಮದ್ಯವನ್ನು ಖರೀದಿಸಲು ತುಂಬಾ ದೂರ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ʼಕಿಂಗ್‌ ಫಿಶರ್‌ʼ ಬ್ರ್ಯಾಂಡ್‌ ನ ಬಿಯರ್‌ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಸಿಗುವಂತೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ