Breaking News

ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ..

Spread the love

ವಿಧಾನಸಭೆ: ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದ್ದು, ಈ ಅವಧಿಯಲ್ಲಾದರೂ ಪ್ರೀತಿ ತೋರಿಸಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ.

 

ನನ್ನ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು ದುರಸ್ತಿ ಆಗಬೇಕಿದೆ. ನೆರೆ ತಡೆ ಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಳೆದ 4 ವರ್ಷದಿಂದಲೂ ಅನುಮೋದನೆ ಕೊಡುತ್ತಲೇ ಇದ್ದಾರೆ. ಇದು ನನ್ನ ಕ್ಷೇತ್ರಕ್ಕೆ ಆದ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಬಳಿಕ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಸರ್ಕಾರಕ್ಕೆ ನಿಮ್ಮ ಕ್ಷೇತ್ರದ ಮೇಲೆ ಕೋಪವಿಲ್ಲ. ಅಗತ್ಯ ಕ್ರಮಕೈಗೊಳ್ಳುವುದು. ಕೆಲವು ಕಡೆ ಮಲಪ್ರಭಾ ನದಿ ಒತ್ತುವರಿಯಾಗಿ ಕಾಲುವೆಯಂತಾಗಿದೆ.

80 ಮೀಟರ್‌ ಅಳತೆ ಇರುವ ನದಿ ಪಾತ್ರ ಕೆಲವು ಕಡೆ 30 ಮೀಟರ್‌ಗೆ ಇಳಿದಿದೆ. ಹೀಗಾಗಿ ಜನವಸತಿ ಇರುವ ಕಡೆ ನೀರು ಬರುತ್ತಿದೆ. ಇಂತಹ ಕಡೆ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.


Spread the love

About Laxminews 24x7

Check Also

ಪ್ರಿಯಕರನ ಜೊತೆ ಸೇರಿ ತಾಯಿಯಿಂದಲೇ ಮಗಳ ಕೊಲೆ: ಕಠಿಣ ಶಿಕ್ಷೆಗೆ ಸಂಬಂಧಿಕರ ಆಗ್ರಹ

Spread the love ಹಾವೇರಿ: ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು. ಆದ್ರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ