Breaking News

ನಾನು ಅಪ್ಪಗ ಹುಟ್ಟಿನಿ, ಆದರ ಗ್ಯಾರಂಟಿ ಇಲ್ಲ ಅಂತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ:ಯತ್ನಾಳ್

Spread the love

ಬಾಗಲಕೋಟೆ: ಒಬ್ಬ ಹಿಂದೂ (Hindu), ಭಾರೀ ಕಟ್ಟರ್ ಹಿಂದೂ ಆದ್ರೆ ರಾಮ ರಾಜ್ಯ ಕೊಡುತ್ತಾನೆ. ಟಿಪ್ಪು ಸುಲ್ತಾನ್ (Tipu Sultna) ಅಂತಹವರು ಮೂರುವರೆ ದೇವಸ್ಥಾನ ಕೆಡವಿ ಹಾಕಿ, ಲಕ್ಷಾಂತರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ‌. ಲಕ್ಷಾಂತರ ಜನರನ್ನು ಮತಾಂತರ ಮಾಡಿದ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿದರು. ಶಿವಾಜಿ ಮಹಾರಾಜರ (Chatrapati Shivaji Maharaj) ಬಗ್ಗೆ ಮಾತನಾಡಿದ್ರೆ ಕೆಲವರಿಗೆ ನೋವು ಆಗುತ್ತದೆ. ನಮ್ಮಲ್ಲಿ ಕೆಲವರು ಟಿಪ್ಪುವಿಗೆ ಹುಟ್ಟಿದಂಗೆ ಮಾತನಾಡುತ್ತಾರೆ. ನಾ ಹಿಂದೂ ಅಂತ ಹಿಂದುತ್ವ ಒಪ್ಪಂಗಿಲ್ಲಂತ. ನಾನು ಅಪ್ಪಗ ಹುಟ್ಟಿನಿ, ಆದರ ಗ್ಯಾರಂಟಿ ಇಲ್ಲ ಅಂತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಛತ್ರಪತಿ ಶಿವಾಜಿ ಮಹಾರಾಜ ಸಮುದಾಯಕ್ಕಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಲಾಯ್ತು. ಇಲ್ಲಿ ಟಿಪ್ಪು ಸುಲ್ತಾನ್ ಗೆ ಹುಟ್ಟಿದಂತ ಕೆಲವರು ಇದನ್ನು ವಿರೋಧ ಮಾಡಿದರು. ಛತ್ರಪತಿ ಶಿವಾಜಿ ಹುಟ್ಟದೇ ಇದ್ರೆ ಮಕ್ಕಳ, ನಾವು ಇಲ್ಲಿ  ಕೂತಂತಹ 224 ಜನ ನೀವ್ಯಾರು ಹಿಂದೂಗಳಾಗಿ ಇರುತ್ತಿರಲಿಲ್ಲ. ನೀವು ಗಡ್ಡ ಬಿಟ್ಗೊಂಡ ಪಾಕಿಸ್ತಾನ ಸೆಷನ್ ನಲ್ಲಿ ಕೂತಿರುವಂತೆ ಕುಳಿತಕೊಳ್ಳುತ್ತಿದ್ದೀರಿ ಎಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದರು.ಶಿವಾಜಿ ಮೂರ್ತಿಗೆ ರಾತ್ರಿ ಕಪ್ಪು ಮಸಿ ಹಚ್ಚಿದ್ದರು. ಟಿಪ್ಪು ಸುಲ್ತಾನ್ ನನ್ನೇಕೆ ಹೊಗಳ್ತಾರಾ? ಯಾರೂ ಅಪಮಾನದ ಬಗ್ಗೆ ಮಾತನಾಡೋದಿಲ್ಲ. ಭಾರತದಲ್ಲಿ ಕ್ಷತ್ರೀಯರು ಇದ್ದಾರೆನ್ನುವ ಕಾರಣಕ್ಕೆ ಹಿಂದು ಸಮಾಜ ಉಳಿದಿದೆ ಎಂದು ಶಾಸಕ ಯತ್ನಾಳ್ ಹೇಳಿದರು.


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ