ಬೆಂಗಳೂರು: ರಾಜ್ಯದಲ್ಲಿ ಐಎಎಸ್ ವರ್ಸಸ್ ಸಮರ ತಾರಕಕ್ಕೇರಿದೆ. ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ನಡುವಿನ ಫೈಟ್ ತಾರಕಕ್ಕೇರಿದೆ.
ಇದರ ನಡುವೆ ಡಿ.ಕೆ ರವಿ ಪತ್ನಿ ಕುಸುಮಾ ಟ್ವೀಟ್ ಕುತೂಹಲ ಮೂಡಿಸಿದೆ. ಯಾವುದೇ ಕಾರಣಕ್ಕೂ ನೀವು ಮಾಡಿದ ಕರ್ಮ ನಿಮ್ಮನ್ನು ಬಿಡಲ್ಲ.
ಬಹಳ ತಡವಾದರೂ, ಬೇಗವಾದರೂ . ಯಾವುದೇ ಕಾರಣಕ್ಕೂ ನೀವು ಮಾಡಿದ ಕರ್ಮ ನಿಮ್ಮನ್ನು ಬಿಡಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಐಎಎಸ್ ವರ್ಸಸ್ ಸಮರ ತಾರಕಕ್ಕೇರಿದೆ. ರೋಹಿಣಿ ಸಿಂಧೂರಿಯವರು ಶಾಸಕ ಸಾರಾ ಮಹೇಶ್ ಬಳಿಯಲ್ಲಿ ಸಂಧಾನಕ್ಕೆ ತೆರಳಿದ ವಿಷಯ ಇದೇ ಮೊದಲು ಎಂದಿರುವಂತ ಐಪಿಎಸ್ ಅಧಿಕಾರಿ ರೂಪಾ ಡಿ ಅವರು, ನಾನು ಹಾಕಿರೋ ಪೋಟೋಗಳು ಕೇವಲ ಸ್ಯಾಂಪಲ್ ಅಷ್ಟೇ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.ಡಿ. ರೂಪಾ ಆರೋಪಕ್ಕೆ ತಿರುಗೇಟು ನೀಡಿರುವ ರೋಹಿಣಿ ಸಿಂಧೂರಿ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರೋಹಿಣಿ ಸಿಂಧೂರಿ ರೂಪಾ ವಿರುದ್ಧ ಕೇಸ್ ದಾಖಲಿಸಲು ನಿರ್ಧಾರ ಮಾಡಿದ್ದೇನೆ. ತೇಜೋವಧೆ, ಮಾನಹಾನಿ, ಪ್ರಕರಣಗಳಡಿ ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇವೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನನ್ನ ತೇಜೋವಧೆಗೆ ಯತ್ನ ಮಾಡುತ್ತಿದ್ದಾರೆ. ರೂಪಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ನನ್ನ ಫೋಟೋ ಯಾರಿಗೆ ಕಳುಹಿಸಿದ್ದೇನೆ ಹೇಳಲಿ ಎಂದು ಹೇಳಿದ್ದಾರೆ.
ಡಿ.ರೂಪಾ ಆರೋಪಗಳೇನು..?
ಇಂದು ತಮ್ಮ ಪೋಸ್ಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಶಾಸಕರ ಬಳಿಗೆ ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋದ ವಿಷಯ ತಿಳಿದು ಅಚ್ಚರಿಯಾಯಿತು. ಐಐಎಸ್ ಅಧಿಕಾರಿ ಆಗಿ ರಾಜಕಾರಣಗಿಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ಶಾಸಕರ ಬಳಿ ಐಎಎಸ್ ಅಧಿಕಾರಿ ಸಂಧಾನದಕ್ಕೆ ಹೋಗಿದ್ದು ಇದೇ ಮೊದಲು. ರೋಹಿಣಿ ಶಾಸಕರ ಬಳಿ ಸಂಧಾನಕ್ಕೆ ಹೋಗುವ ಅಗ್ಯ ಏನಿತ್ತು? ಎಂದು ಪ್ರಶ್ನಿಸಿದರು.ಐಎಎಸ್ ಹುದ್ದೆ ಎಂದರೇ ಎಲ್ಲರಿಗೂ ಗೌರವ ಹುಟ್ಟಿಸೋ ಹುದ್ದೆಯಾಗಿದೆ. ಅಲ್ಲದೇ ಜನಸಾಮಾನ್ಯರು ಕೂಡ ಐಎಎಸ್ ಆಗಬೇಕು ಎನ್ನುವ ಹುದ್ದೆಯಾಗಿದೆ. ಇದಕ್ಕಾಗಿಯೇ ಅನೇಕರು ಪರೀಕ್ಷೆ ತೆಗೆದುಕೊಂಡು ಬರೆಯುತ್ತಾರೆ. ಎಲ್ಲರಿಗೂ ಪಾಠ ಹೇಳುವ ಸ್ಥಾನ. ಅಂತಹ ಸ್ಥಾನದಲ್ಲಿರುವಂತವರು ಹೀಗೆ ಮಲಗಿರೋದು, ಎಲ್ಲೋ ಇರೋದು ಸೇರಿದಂತೆ ವಿವಿಧ ಪೋಟೋಗಳನ್ನು ಪುರುಷರಿಗೆ ಕಳುಹಿಸುತ್ತಾರೆ ಅಂದರೇ ಏನು ಅರ್ಥ ಅಂತ ತರಾಟೆಗೆ ತೆಗೆದುಕೊಂಡರು.
Laxmi News 24×7