ಸವದತ್ತಿ: ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಮನೆಯ ಛಾವಣಿ ಕುಸಿತಕ್ಕೊಳಗಾಗಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಗ್ರಾಮದ ಶಾಂತವ್ವ ಶಿವಮೂರ್ತಯ್ಯ ಹಿರೇಮಠ (60) ಮೃತಪಟ್ಟವರು.
ಹಳೆಯದಾದ ಮನೆಯ ಛಾವಣಿ ಏಕಾಏಕಿ ಕುಸಿತಕ್ಕೊಳಗಾಯಿತು. ಅದರಡಿಯಲ್ಲೇ ಇದ್ದ ಶಾಂತವ್ವ ಅವರ ಮೇಲೆ ವ್ಯಾಪಕ ಪ್ರಮಾಣದ ಮಣ್ಣು, ಹಲಗೆಗಳು ಬಿದ್ದು ಅದರಲ್ಲಿ ಮುಚ್ಚಿ ಹೋಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಈ ಸಂಬಂಧ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.