ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯಾಪ್ತಿ ಹೆಚ್ಚಾಗಿದ್ದು, ವೀಡಿಯೋಗಳನ್ನು ಹಂಚಿಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಕೆಲವೊಂದು ವೀಡಿಯೋ ಧನಾತ್ಮಕವಾಗಿದ್ದರೆ, ಇನ್ನೂ ಕೆಲವೊಂದು ಋಣಾತ್ಮಕವಾಗಿರುತ್ತೆ. ಆದರೆ ಕೆಲವೊಂದು ವೀಡಿಯೋಗಳು ಯಾರೂ ಊಹಿಸದ, ನೋಡದ ರೀತಿಯಲ್ಲಿರುತ್ತದೆ.
ಹಾಗೆಯೇ ಇಲ್ಲೊಂದು ವೀಡಿಯೋ ನೆಟ್ಟಿಗರನ್ನು ನಿಬ್ಬರಗಾಗಿಸುವಂತೆ ಮಾಡಿದೆ.
ಹೌದು.. ಈ ವೈರಲ್ ವಿಡಿಯೋದಲ್ಲಿ, ಕೆಲವು ಜನರು ಈ ಸ್ಥಳಕ್ಕೆ ಭೇಟಿ ನೀಡಲು ಹೋಗಿದ್ದಾರೆ, ಆದರೆ ಅಲ್ಲಿಗೆ ತಲುಪಿದ ನಂತರ ಅವರಿಗೆ ಶಾಕ್ ಕಾದಿತ್ತು. ವಾಸ್ತವವಾಗಿ, ಪ್ರತಿ ಮರದ ಹಿಂದೆ ಒಂದೆರಡು ಜೋಡಿ ಅಂಟಿಕೊಂಡಿರುವ ದೃಶ್ಯವನ್ನು ನೋಡಿದರು. ಪ್ರವಾಸಿಗರ ಹಾವಭಾವ ನೋಡಿದರೆ, ಆ ದೃಶ್ಯವನ್ನು ನೋಡಿ ತುಂಬಾ ಆಶ್ಚರ್ಯ ಪಟ್ಟಿದ್ದಾರೆ ಎಂದು ತಿಳಿಯುತ್ತದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.