ಜೈಪುರ: ಬಜೆಟ್ ಅಧಿವೇಶನದ ವೇಳೆ ಹಾಸ್ಯಾಸ್ಪದ ಘಟನೆಯೊಂದು ರಾಜಸ್ಥಾನದ ವಿಧಾನಸಭೆಯಲ್ಲಿ ನಡೆದಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಳೆ ಬಜೆಟ್ ಓದುವ ಮೂಲಕ ನಗೆಪಾಟಲಿಗೆ ಕಾರಣರಾಗಿದ್ದಾರೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಮಂಡಿಸಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಕಳೆದ ವರ್ಷದ ಬಜೆಟ್ ಓದಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಜೆಟ್ ಪ್ರತಿ ಕೈಗೆತ್ತಿಕೊಂಡ ಸಿಎಂ ಗೆಹ್ಲೋಟ್, ಬಜೆಟ್ ಓದಲು ಆರಂಭಿಸಿದ್ದಾರೆ. ಅದು ಕಳೆದ ವರ್ಷದ ಹಳೆ ಬಜೆಟ್ ಎಂಬುದೂ ಸಿಎಂ ಗಮನಕ್ಕೆ ಬಂದಿಲ್ಲ. ಹಳೆ ಬಜೆಟ್ ಓದುತ್ತಿದ್ದಂತೆ ವಿಪಕ್ಷ ಬಿಜೆಪಿ ನಾಯಕರು ಗದ್ದಲ ಆರಂಭಿಸಿದ್ದಾರೆ. ಗದ್ದಲದ ನಡುವೆಯೂ 7 ನಿಮಿಷಗಳ ಕಾಲ ಗೆಹ್ಲೋಟ್ ಬಜೆಟ್ ಓದಿದ್ದಾರೆ.