Breaking News

ಇಂಡಿ ಜಿಲ್ಲೆ ಮಾಡಿಯೇ ತೀರುತ್ತೇನೆ: ಶಾಸಕ ಯಶವಂತ್ರಾಯಗೌಡ

Spread the love

ವಿಜಯಪುರ: ರಾಜಕೀಯವಾಗಿ ಬಹಳ ದಿನ ಅಧಿಕಾರದಲ್ಲಿ ಇರಲು ಬಯಸದ ನಾನು, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕ ಜಿಲ್ಲೆ, ಇಂಡಿ ಜಿಲ್ಲಾ ಕೇಂದ್ರ ಮಾಡಿಯೇ ತೀರುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪ್ರತಿಜ್ಞೆ ಮಾಡಿದರು.

 

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗವನ್ನು ನೀರಾವರಿ ಇಂಡಿ ನಗರಸಭೆ, ಜಿಲ್ಲಾ ಕೇಂದ್ರ ಮಾಡುವುದು ನನ್ನ ರಾಜಕೀಯ ಭವಿಷ್ಯದ ಕನಸು. ನಂಜುಂಡಪ್ಪ ವರದಿ ಕೂಡ ಸಣ್ಣ ಜಿಲ್ಲೆಗಳ ಸೃಷ್ಟಿಯಿಂದ ತ್ವರಿತ ಅಭಿವೃದ್ಧಿ ಪ್ರತಿಪಾದಿಸಿದೆ. ಇಂಡಿ ಜಿಲ್ಲೆ ಸೃಷ್ಟಿಸಲು ಸದನದಲ್ಲಿ ದ್ವನಿ ಎತ್ತಿದ್ದೇನೆ ಎಂದರು.

ಜಿಲ್ಲಾ ಕೇಂದ್ರಕ್ಕೆ ಅಗತ್ಯ ಇರುವ ಪೂರಕ ಮೂಲಭೂತ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾ ಕೇಂದ್ರ ಮಾಡಿದಲ್ಲಿ ಚಡಚಣ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ ತಾಲೂಕಗಳು ಇಂಡಿ ಕೇಂದ್ರಕ್ಕೆ ಹತ್ತಿರ ಇದೆ. ಹೀಗಾಗಿ ಇಂಡಿ ಜಿಲ್ಲೆ ರೂಪಿಸುವಲ್ಲಿ ಸದಾ ನನ್ನದು ರಾಜಕೀಯ ಬದ್ಧತೆ ತೋರುತ್ತೇನೆ ಎಂದರು.

ಹೀಗಾಗಿ ಇಂಡಿ ಜಿಲ್ಲಾ ಕೇಂದ್ರ ಮಾಡುವಲ್ಲಿ ನನ್ನ ಹೋರಾಟ ಮುಂದುವರೆಯಲಿದೆ. ಇಂಡಿ ಜಿಲ್ಲಾ ಕೇಂದ್ರ ರಚನೆಯಿಂದ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಇಂಡಿ ಭಾಗದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಹಾಗೂ ಸಮಾಜ ಬಾಹೀರ ಕೃತ್ಯಗಳಿಗೆ ಜಿಲ್ಲಾ ಕೇಂದ್ರ ರೂಪಿಸುವುದರಿಂದ ಕಡಿವಾಣ ಬೀಳಲಿದೆ ಎಂದರು.

ಇಂಡಿ ನಗರಸಭೆ ಹಂತಕ್ಕೆ ಮೇಲ್ದರ್ಜೆಗೆ ಏರಲು ಅಗತ್ಯದ ಜನಸಂಖ್ಯೆ ಹಾಗೂ ಸೌಲಭ್ಯ ಹೊಂದಿದೆ. ಇಂಡಿ ಪಟ್ಟಣದ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದೇನೆ ಎಂದರು.

ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಭಾಗದಲ್ಲಿ ಬೆಳೆಯುವ ಕಾಗ್ಜಿ ಲಿಂಬೆಗೆ ಜಿಐ ಟ್ಯಾಗಿಂಗ್ ಮಾನ್ಯತೆ ಸಿಕ್ಕಿದೆ. ಇದು ನಾನು ರಾಜಕೀಯ ರಹಿತ ಹಾಗೂ ಅಭಿವೃದ್ಧಿ ವಿಷಯದಲ್ಲಿ ನಾನು ತೋರಿದ ಬದ್ಧತೆಯ ಪ್ರತೀಕ ಎಂದರು.

ಇಂಡಿ ಮಾತ್ರವಲ್ಲ ಮುದ್ದೇಬಿಹಾಳ ತಾಲೂಕಿನಿಂದ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಇರುವ ಅಂತರ ನೂರಾರು ಕಿ.ಮೀ. ದೂರವಿದೆ. ಬಾಗಲಕೋಟೆ ಜಿಲ್ಲೆಯಿಂದ ಜಮಖಂಡಿ ಪ್ರತ್ಯೇಕ ಜಿಲ್ಲೆ ಮಾಡುವ ಕೂಗಿದೆ. ಸುಗಮ ಆಡಳಿತಕ್ಕಾಗಿ ಸಣ್ಣ ಜಿಲ್ಲೆಗಳ ರಚನೆ ಅಗತ್ಯವಿದೆ ಎಂದರು.

ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇರುವ ನಾನು ಹೋರಾಟ ರಹಿತವಾಗಿ ನಮ್ಮ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಹೀಗಾಗಿ ಇಂಡಿ ಜಿಲ್ಲಾ ನಿರ್ಮಾಣ ನನ್ನ ಕನಸಿನ ಯೋಜನೆ ಖಂಡಿತಾ ಸಾಧ್ಯವಿದೆ ಎಂದರು.


Spread the love

About Laxminews 24x7

Check Also

ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

Spread the love ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್‌ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ