Breaking News

ಸಂಭ್ರಮದ ಬಸವೇಶ್ವರ ರಥೋತ್ಸವ

Spread the love

ಡಬಿ: ಸಮೀಪದ, ಯರಗಟ್ಟಿ ತಾಲ್ಲೂಕಿನ ಸುಕ್ಷೇತ್ರ ಮುಗಳಿಹಾಳ ಬಸವೇಶ್ವರ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ಭಾಗೋಜಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಮುಗಳಿಹಾಳದ ಶಿವಪುತ್ರ ಸ್ವಾಮಿಗಳು ಹಾಗೂ ಸಾಧು, ಸಂತರು ನೇತೃತ್ವ ವಹಿಸಿದ್ದರು.

ಗ್ರಾಮದ ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿ, ರಥದ ಮುಂದೆ ಸಾಗಿದರು.

ಅಪಾರ ಭಕ್ತರು ಸೇರಿ ಜಗಜ್ಯೋತಿ ಬಸವಣ್ಣನವರಿಗೆ ಜೈ ಎಂದು ಜೈಕಾರ ಹಾಕುತ್ತ ರಥ ಎಳೆದರು. ಹೂವು, ಹಣ್ಣು, ಕಾರೀಕ್‌ ಹಾರಿಸುತ್ತ ಭಕ್ತಿಗೆ ಮೆರೆದರು. ದಾರಿಯುದ್ದಕ್ಕೂ ಭಕ್ತರು ಹಸಿರು ತಳಿಯ- ತೋರಣಗಳಿಂದ ಅಲಂಕಾರ ಮಾಡಿದ್ದರು. ಭಜಣೆ, ಡೊಳ್ಳು, ಜಾಂಜ್‌ ಪಥಕ್‌, ಮುಂತಾದ ವಾದ್ಯಗಳೊಂದಿಗೆ ರಥೋತ್ಸವಕ್ಕೆ ಮೆರಗು ತಂದವು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ