ಅಂಕಲಗಿ: ಹಿರಿಯರು ನಮ್ಮ ಇಂದಿನ ಬಹು ದೊಡ್ಡ ಆಸ್ತಿ. ಅವರ ನಡೆ, ನುಡಿ, ಆದರ್ಶಗಳು ನಮಗೆಲ್ಲ ಸ್ಫೂರ್ತಿ ಎಂದು ಸತೀಶ ಶುಗರ್ಸ್‌ನ ಉಪಾಧ್ಯಕ್ಷ ಎಲ್.ಆರ್.ಕಾರಗಿ ಹೇಳಿದರು.
ಸಮೀಪದ ಮಿಡಕನಟ್ಟಿ ಗ್ರಾಮದಲ್ಲಿ ಶುಕ್ರವಾರ ಶತಾಯುಷಿಗಳಿಗಾಗಿ ಹಮ್ಮಿಕೊಂಡ ಶತಮಾನೋತ್ಸವ ಸಮಾರಂಭದಲ್ಲಿ ಐವರು ಶತಾಯುಷಿಗಳನ್ನು ಕಾರಗಿ ಪರಿವಾರದ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಶತಾಯುಷಿಗಳಾದ ರಾಮಸಿದ್ದಪ್ಪ ಹಾಲಪ್ಪ ಕಾರಗಿ (105), ಹಾಲಪ್ಪ ಸಿದ್ದಪ್ಪ ಸಂಸುದ್ದಿ (104), ಶಿವಲಿಂಗಪ್ಪ ಶಿದ್ಲಿಂಗಪ್ಪ ಪಾಟೀಲ (ನಬಾಪೂರ)-102), ಭೀಮಪ್ಪ ಹನುಮಂತಪ್ಪ ಹೊಸೂರ (103) ಸನ್ಮಾನ ಪಡೆದರು.
ಡಾ.ವಿನೋದ ಕಾರಗಿ, ಮಹಾಂತೇಶ ಕಾರಗಿ ಸೇರಿದಂತೆ ಗ್ರಾಮಸ್ಥರು, ಅಭಿಮಾನಿಗಳು ಇದ್ದರು. ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಕಾರಗಿ ನಿರೂಪಿಸಿದರು. ಮಹಾಂತೇಶ ಕಾರಗಿ ವಂದಿಸಿದರು.
Laxmi News 24×7