ಹಿಂದಿನ ಚುನಾವಣೆಯಲ್ಲಿಯೂ ನನ್ನನ್ನು ಸೋಲಿಸಲು ಬಾದಾಮಿಗೆ ಸ್ವತ: ಅಮಿತ್ ಶಾ ಅವರೇ ಬಂದಿದ್ದರು. ನನ್ನ ವಿರುದ್ಧ ಶ್ರೀರಾಮುಲು ಅವರನ್ನು ಕಣಕ್ಕಿಲಿಸಿದರು. ಆದರೂ ಬಾದಾಮಿಯಲ್ಲಿ ಜನರು ನನ್ನನ್ನು ಗೆಲ್ಲಿಸಿದರು. ಈಬಾರಿಯು ಯಾರೇ ಬಂದರೂ ಕೋಲಾರದಲ್ಲಿ ನಾನೇ ಗೆಲ್ಲುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಾರೇ ಬಂದರೂ ಕೋಲಾರದಲ್ಲಿ ನಾನೇ ಗೆಲ್ಲುತ್ತೇನೆ. ಬಾದಾಮಿಯಲ್ಲಿ ನನ್ನನ್ನು ಸೋಲಿಸಲು ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದರು ಆದರೂ ಬಿಜೆಪಿಗೆ ನನ್ನನ್ನು ಸೋಲಿಸಲು ಸಾಧ್ಯವಾಗಿಲ್ಲ. ಬಾದಮಿಯಲ್ಲಿ ಕೇವಲ 2 ದಿನ ಮಾತ್ರ ಪ್ರಚಾರ ಮಾಡಿದ್ದೆ.
ಆದರೂ ಅಲ್ಲಿನ ಜನ ಗೆಲ್ಲಿಸಿದ್ದರು ಎಂದು ತಿಳಿಸಿದ್ದಾರೆ.ಬಾದಾಮಿ ದೂರವಾಗುತ್ತದೆ ಎಂಬ ಕಾರಣಕ್ಕೆ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಅಲ್ಲಿನ ಜನ ಹೆಲಿಕಾಪ್ಟರ್ ಕೊಡುತ್ತೇವೆ ಎಂದಿದ್ದರು. ಎಲ್ಲದಕ್ಕೂ ಹತ್ತಿರವಾಗುತ್ತೆ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
Laxmi News 24×7