Breaking News

ಕೆಳಗಿನ ಮನೆ ಆಂಟಿ ಜೊತೆಗೆ ಮೇಲಿನ ಮನೆ ಅಂಕಲ್‌ ಜೂಟ್‌!

Spread the love

ಬೆಂಗಳೂರು: ಒಂದೇ ಕಟ್ಟಡದ ಕೆಳ ಮನೆಯಲ್ಲಿದ್ದ ಆಂಟಿ ಹಾಗೂ ಮೇಲಿನ ಮನೆಯಲ್ಲಿದ್ದ ಎರಡು ಮಕ್ಕಳ ತಂದೆ ಜತೆಯಾಗಿ ಪರಾರಿಯಾಗಿರುವ ವಿಚಿತ್ರ ಲವ್‌ ಸ್ಟೋರಿ ಜ್ಞಾನಭಾರತೀ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾರುತಿ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

 

ಕೆಳ ಮಹಡಿಯಲ್ಲಿ ವಾಸವಿದ್ದ ಮುಬಾರಕ್‌ (28) ಅವರು ತಮ್ಮ ಪತ್ನಿ ಶಾಜಿಯಾ (22) ನಾಪತ್ತೆಯಾಗಿರುವುದಾಗಿ ಹಾಗೂ ಮೇಲ್ಮನೆಯಲ್ಲಿರುವ ಝೀನತ್‌ (29) ಅವರು ತಮ್ಮ ಪತಿ ಮೊಹಮ್ಮದ್‌ ನವೀದ್‌ (37) ಕಾಣೆಯಾಗಿರುವುದಾಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

2022ರ ಡಿ.9ರಂದು ಈ ಘಟನೆ ನಡೆದಿದ್ದು, ತಿಂಗಳಾದರೂ ಇಬ್ಬರ ಬಗ್ಗೆ ಸುಳಿವೂ ಸಿಕ್ಕಿಲ್ಲ. ಪೊಲೀಸರು ಸತತವಾಗಿ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದರೂ, ನವೀದ್‌ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡ ಹಿನ್ನೆಲೆಯಲ್ಲಿ ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿದೆ. ಇದೀಗ ತಮ್ಮ ಪತಿ-ಪತ್ನಿಯರನ್ನು ಹುಡುಕಿಕೊಡುವಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿಗೂ ದೂರುದಾರರು ಮನವಿ ಮಾಡಿದ್ದಾರೆ.

ಗಂಡನನ್ನು ಹುಡುಕಿಕೊಡಿ: ಅಹಮ್ಮದ್‌ ನವೀದ್‌ನನ್ನು 12 ವರ್ಷಗಳ ಹಿಂದೆ ವಿವಾಹವಾಗಿದ್ದೆ. ನಮಗೆ ಇಬ್ಬರು ಮಕ್ಕಳಿದ್ದು, ಪತಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು, ಇಬ್ಬರೂ ಚೆನ್ನಾಗಿದ್ದೆವು. ಡಿ.9ರಂದು 6 ಗಂಟೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಕಾರಿನಲ್ಲಿ ಮನೆಯಿಂದ ಹೊರಟವರು ಇದುವರೆಗೂ ವಾಪಸ್‌ ಬಂದಿಲ್ಲ. ಕುಟುಂಬಸ್ಥರು, ಸ್ನೇಹಿತರಲ್ಲಿ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ. ನಾವು ವಾಸಿಸುವ ಕೆಳಗಿನ ಮನೆಯ ಮಹಿಳೆ ಶಾಜಿಯಾ ಜತೆಗೆ ಹೋಗಿರುವ ಸಂಶಯ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಝೀನತ್‌ ಮನವಿ ಮಾಡಿದ್ದಾಳೆ.

ಹೆಂಡತಿಯನ್ನು ಪತ್ತೆ ಮಾಡಿ: ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅನ್ಯೋನ್ಯವಾಗಿ ವಾಸಿಸುತ್ತಿದ್ದೆವು. ಜೀವನ ನಿರ್ವಹಣೆಗೆ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ಶಾಜಿಯಾ ಗೃಹಿಣಿ ಯಾಗಿರುತ್ತಾಳೆ. 2022 ಡಿ.8ರಂದು ರಾತ್ರಿ ಎಷ್ಟೊತ್ತಾದರೂ ಮೊಬೈಲ್‌ ನೋಡಿಕೊಂಡು ಇರುತ್ತೀಯಾ ಎಂದು ಬೈದಿದ್ದೆ. ಮರುದಿನ ಡಿ.9ರಂದು ಮುಂಜಾನೆ 5.30ಕ್ಕೆ ಶಾಜಿಯಾಗೆ ಹೇಳಿ ಕೆಲಸಕ್ಕೆ ಹೋಗಿದ್ದೆ. ಬೆಳಗ್ಗೆ 9.30ಕ್ಕೆ ಪತ್ನಿಗೆ ಕರೆ ಮಾಡಿ ಏನು ಮಾಡುತ್ತಿದ್ದಿಯಾ ಎಂದು ವಿಚಾರಿಸಿದಾಗ ಮೊದಲನೇ ಮಗಳಾದ ಐಶಾಳನ್ನು ಶಾಲೆಗೆ ಬಿಡಲು ಹೋಗುತ್ತಿರುವುದಾಗಿ ಹೇಳಿದ್ದಳು.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ