ವಿಜಯಪುರ : ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್-ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಹೇಳಿ ಎಂದು ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆಬ್ರುವರಿ ಮುಗಿಯಲಿ ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಯಾರು ವಲಸೆ ಬರಲಿದ್ದಾರೆ ಎಂದು ಹೇಳುತ್ತೇನೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದ್ದು, ನಾಗಠಾಣಾ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಸೇರಿದಂತೆ ಇಬ್ಬರು ಶಾಸಕರಿಗೆ ಭವಿಷ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶವಿದೆ ಎಂದರು.
ರೈತನ ಮಗ ಕುಮಾರಣ್ಣ ನಿತ್ಯವೂ ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅವರ ಬಳಿಗೆ ಹಳ್ಳಿಗಳ ಜನರನ್ನು ಕೊರೆದೊಯ್ಯಲಾಗುತ್ತಿವೆ. ಇವರ ಅಧಿಕಾರಕ್ಕೆ 106 ರೂ. ಪೆಟ್ರೋಲ್, ಕಪ್ಪುಹಣ ತರುವುದಾಗಿ ಹೇಳಿ ನೋಟ್ ಬ್ಯಾನ್ ಮಾಡಿ ಆರ್ಥಿಕ ದುಸ್ಥಿತಿ ತಂದರು. ಆದರೆ ಜೆಡಿಎಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮತದಾನ ನೀಡುವ ಶಕ್ತಿಯಿಂದ ನಾವೆಂದು ರಾಜ್ಯದ ಜನರು ತಲೆ ತಗ್ಗಿಸುವ ಪರಿಸ್ಥಿತಿ ಬರದಂತೆ ಅಧಿಕಾರ ನಡೆಸುತ್ತೇವೆ ಎಂದರು.