ಬೆಳಗಾವಿ – ಒಂದೂವರೆ ವರ್ಷದಿಂದ ನಿರೀಕ್ಷೆಯಲ್ಲಿದ್ದ ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ದಿನಾಂಕ ಪ್ರಕಟವಾಗಿದೆ.
ಪ್ರಾಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಹಾಗೂ ಹಿಂದುಳಿದ ಬ ವರ್ಗದ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿದೆ.
ಫೆಬ್ರವರಿ 6ರಂದು ಚುನಾವಣೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸ್ವೀಕಾರ ಆರಂಭವಾಗಲಿದೆ. 3 ಗಂಟೆಗೆ ಸಭೆ ಆರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ಕ್ರಮ ಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆ ಹಿಂದಕ್ಕೆ ಪಡೆಯುವುದು ಹಾಗೂ ಉಮೇದುವಾರರ ಹೆಸರು ಘೋಷಣೆ ನಡೆಯಲಿದೆ. ಅವಿರೋಧ ಆಯ್ಕೆಯಾಗದಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆಯಲಿದೆ. ನಂತರ ಫಲಿತಾಂಶ ಘೋಷಣೆಯಾಗಲಿದೆ.
2021ರ ಸೆಪ್ಟಂಬರ್ 3ರಂದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಸದಸ್ಯರ ಆಯ್ಕೆ ನಡೆದಿತ್ತು. ಆದರೆ ಈವರೆಗೂ ಪ್ರತಿಜ್ಞಾವಿಧಿ ಮತ್ತು ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ
Laxmi News 24×7