ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಡಬಲ್ ಎಂಜಿನ್ ಸರ್ಕಾರ ರೈತರಿಗೆ ಡಬಲ್ ಬೆಲೆ ಕೊಡುತ್ತೇವೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕು. ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕೇವಲ ಕಣ್ಣು ಒರೆಸುವುದರಿಂದ ಉಪಯೋಗವಿಲ್ಲ. ಜನರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೀರಿನ ಬೆಲೆ 23, 24 ಇದೆ. ಹಾಲಿನ ಬೆಲೆ 27,28 ಇದೆ. ಅವರಿಗೆ ಏನ್ ಬೆಲೆ ಕೊಡುತ್ತಾರೆ ಎನ್ನುವುದನ್ನು ಹೇಳಬೇಕು. ಅವರು ಸಮಾವೇಶ ಮಾಡಲಿ ನಮ್ಮದು ಏನು ಅಭ್ಯಂತರ ಇಲ್ಲ. ಹಿಂದೊಮ್ಮೆ ಪೂಜೆ ಮಾಡಿದ್ದರು. ಇವಾಗ ಮತ್ತೆ ಮಾಡ್ತಿದ್ದಾರೆ. ಅದಕ್ಕೆ ನಮ್ಮದು ಏನು ಅಭ್ಯಂತರ ಇಲ್ಲ. ಆದರೆ ಬಿಜೆಪಿಯವರು ಬರೀ ಚಾಕಲೇಟ್ ಕೊಡುವ ಕೆಲಸ ಮಾಡತ್ತಿದೆ ಎಂದರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ. ನಿಮ್ಮದು ಟ್ರಿಪಲ್ ಇಂಜಿನ್ ಸರ್ಕಾರ, ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗಲಿಲ್ಲ. ಅದಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ನಮಗೆ ಜನ ಬೆಂಬಲ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ನಿನ್ನೆ ಕೇಂದ್ರ ಸಚಿವ ಜೋಶಿ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಯಾವ ಡೇಟ್ ಇಲ್ಲ. ಬರೀ ರೈತರಿಗೆ ಚಾಕಲೇಟ್ ಕೊಡುತ್ತಿದ್ದಾರೆ. ಯಡಿಯೂರಪ್ಪ ಹಿಂದೆ ಒಂದೇ ತಿಂಗಳಲ್ಲಿ ಯೋಜನೆ ಆರಂಭಿಸ್ತೀವಿ ಎಂದಿದ್ದರು. ಜೋಶಿ ದೊಡ್ಡ ಸ್ಥಾನದಲ್ಲಿದ್ದು ಹೀಗ ಯಾಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ 2 ನೇ ತಾರೀಖ ಸಮಾವೇಶ ನಾವು ನಿಲ್ಲಿಸುವುದಿಲ್ಲ. ಇದೀಗ ಕೃಷ್ಣ ವಿಚಾರವಾಗಿ ಸುರ್ಜೇವಾಲಾ, ಸಿದ್ದರಾಮಯ್ಯ,ನಾನು ಹೋಗ್ತೀದಿವಿ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತದೆ. ನಾವು ಸಮಸ್ಯೆ ಬಗೆ ಹರಿಸುತ್ತೇವೆ.
Laxmi News 24×7