ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಹತ್ತಿರ ಪ್ರತಿಭಟನ ಸ್ಥಳದಲ್ಲಿ ಎಸೆದಿದ್ದ ಆಹಾರ ತಿಂದು 10 ಕುರಿಗಳು ಮೃತಪಟ್ಟಿವೆ. 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ.
‘ಡಿ.22ರಂದು ಇಲ್ಲಿ ನಡೆದಿದ್ದ ವಿರಾಟ್ ಪಂಚಶಕ್ತಿ ಸಮಾವೇಶದ ಸ್ಥಳದಲ್ಲಿಯೇ ಉಳಿದಿದ್ದ ಆಹಾರ ಎಸೆಯಲಾಗಿತ್ತು.
ಭಾನುವಾರ ಸಂಜೆ ಇದನ್ನೇ ಕುರಿಗಳು ತಿಂದಿದ್ದವು. ಸೋಮವಾರ ಬೆಳಗಿನವರೆಗೆ ನರಳಾಡಿ ಸತ್ತಿವೆ’ ಎಂದು ಕುರಿಗಾಹಿಗಳು ದೂರಿದ್ದಾರೆ.
‘ಆಹಾರವನ್ನು ಮೂರು ದಿನದ ಬಳಿಕ ಕುರಿಗಳು ತಿಂದಿದ್ದು, ಜೀರ್ಣವಾಗದೆ ಮೃತಪಟ್ಟಿವೆ. ಇದಕ್ಕೆ ‘ರುಮಿನಲ್ ಅಸಿಡೋಸಿಸ್’ ಎನ್ನುತ್ತೇವೆ. ಮರಣೋತ್ತರ ಪರೀಕ್ಷೆ ನಡೆದಿದೆ. ಪಶು ವೈದ್ಯರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಆಂಬುಲೆನ್ಸ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಕುರಿಗಳ ಆರೋಗ್ಯದ ಮೇಲೆ ಮೂರು ದಿನ ನಿಗಾ ಇರಿಸಲಾಗುವುದು’
Laxmi News 24×7