Breaking News

ಸಿಎಂ ಬೆಂಗಾವಲು ವಾಹನ ತಡೆದ ಆಶ್ರಯ ಮನೆ ಫಲಾನುಭವಿಗಳು

Spread the love

ಆಶ್ರಯ ಮನೆ ಫಲಾನುಭವಿಗಳ ಮನವಿ ಸ್ವೀಕರಿಸಲಿಲ್ಲ ಎಂದು ಆರೋಪಿಸಿ ಆಶ್ರಯ ಮನೆ ಫಲಾನುಭವಿಗಳು ಸಿಎಂ ಬೆಂಗಾವಲು ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಹುಬ್ಬಳ್ಳಿಯ ಸಿಎಂ ಅವರ ಆದರ್ಶ ನಗರದ ನಿವಾಸದ ಎದುರು ನಡೆದಿದೆ.

ಜಗದೀಶ್ ನಗರ ಆಶ್ರಯ ಯೋಜನೆಯ 209 ಮನೆಗಳ ಹಂಚಿಕೆ ಹಾಗೂ ಹಕ್ಕು ಪತ್ರ ವಿತರಣೆ ಮಾಡುವಂತೆ ಫಲಾನುಭವಿಗಳು ಸಿಎಂಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದ್ರೆ ಸಿಎಂ ಅವರು ಸಮಯದ ಅಭಾವದಿಂದ ಅವರ ಮನವಿ ಸ್ವೀಕರಿಸದೆ ಹಾಗೇ ಮುಂದೆ ನಡೆದರು. ಇದರಿಂದ ಆಕ್ರೋಶಗೊಂಡ ಜನರು ಬೆಂಗಾವಲು ವಾಹನ ತಡೆದು ಪ್ರತಿಭಟನೆ ನಡೆಸಿದರು.

ಆಗ ಡಿಸಿಪಿ ಶಹೀಲ್ ಬಾಗ್ಲಾ ಅವರು ಸಿಎ‌ಂ ಅವರ ಆಪ್ತಕಾರ್ಯದರ್ಶಿ ಸಂಪರ್ಕಿಸಿ ನಗರದ ವಿಮಾನ ನಿಲ್ದಾಣದಲ್ಲಿ ಮನವಿ ಸ್ವೀಕರಿಸಲು ಅವಕಾಶ ಕಲ್ಪಿಸಿಕೊಟ್ಟರು. ಆಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡಲೇ ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸೂಚನೆ ನೀಡಿದರು.


Spread the love

About Laxminews 24x7

Check Also

ಸಾರಿಗೆ ಬಸ್​ ಪಲ್ಟಿಯಾಗಿ ಕಂಡಕ್ಟರ್ ಸಾವು, ಹಲವರಿಗೆ ಗಾಯ

Spread the loveರಾಯಚೂರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾಗಿ ಕಂಡಕ್ಟರ್ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ