Breaking News

ಆಪರೇಷನ್ ಬಾಂಬ್ ಸಿಡಿಸಿದ ಸಚಿವ ಮುನಿರತ್ನ

Spread the love

ಕೋಲಾರ: ಕಂದಾಯ ಸಚಿವ ಆರ್.ಅಶೋಕ್ ಆಪರೇಷನ್ ಕಮಲದ ಸುಳಿವು ನೀಡಿದ ಬೆನ್ನಲ್ಲೇ ತೋಟಗಾರಿಕಾ ಸಚಿವ ಮುನಿರತ್ನ 10 ಕಾಂಗ್ರೆಸ್ ನಾಯಕರ ಟೀಂ ನ್ನು ಕರೆತರುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಸಮ್ಮಿಶ್ರ ಸರ್ಕಾರ ಇದ್ದಾಗ ನಾವು 17 ಶಾಸಕರು ಬಿಜೆಪಿಗೆ ಬಂದಿದ್ದೆವು.

ಈಗ 10 ಶಾಸಕರು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ ಅವರನ್ನು ಬಿಜೆಪಿಗೆ ಕರೆತರಲಾಗುವುದು ಎಂದರು.

ಒಟ್ಟು 22 ಶಾಸಕರು ರೆಡಿ ಇದ್ದಾರೆ ಅವರಲ್ಲಿ ನಾವು 10 ಜನರನ್ನು ಆಯ್ಕೆ ಮಾಡಿದ್ದೇವೆ. ಕಾದುನೋಡಿ ಕಾಂಗ್ರೆಸ್ ನ 10 ಶಾಸಕರು ಬಿಜೆಪಿಗೆ ಬರ್ತಾರೆ. ನಮ್ಮ ಹಳೇ ಮಿತ್ರರಾದ ಹತ್ತು ಜನರನ್ನು ಕರೆ ತರುತ್ತಿದ್ದೇವೆ. ಈ ಬಾರಿ ಬಿಜೆಪಿಯವರೇ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದಾರೆ.


Spread the love

About Laxminews 24x7

Check Also

ಹಬ್ಬದ ಅವಧಿಯಲ್ಲಿ ಗುರಿ ಮೀರಿದ ಸಾಧನೆ; 1,100 ಮೆಟ್ರಿಕ್ ಟನ್ ನಂದಿನಿ ಸಿಹಿ ಉತ್ಪನ್ನ ಮಾರಾಟ: ಸಚಿವ ಕೆ.ವೆಂಕಟೇಶ್

Spread the love ಬೆಂಗಳೂರು: ಈ ಬಾರಿ ಹಬ್ಬದ ಅವಧಿಯಲ್ಲಿ ಗುರಿ ಮೀರಿ ನಂದಿನಿ ಸಿಹಿ ತಿಂಡಿ ಉತ್ಪನ್ನಗಳ ಮಾರಾಟವಾಗಿದೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ