ಬೆಂಗಳೂರು: ನಗರದಲ್ಲಿನ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳ ಅವಧಿಯನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.
ಡಿಸೆಂಬರ್ 14ರ ನಾಳೆ ಮತ್ತು ಡಿಸೆಂಬರ್ 15ರ ನಾಡಿದ್ದು ಮಾತ್ರವೇ ಫೀಪಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅನುಮತಿಸಿ ಆದೇಶಿಸಿದ್ದಾರೆ.
ಅಂದಹಾಗೇ ಫೀಪಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ಓಪನ್ ಮಾಡುವಂತ ಕಾಲಾವಧಿ ವಿಸ್ತರಿಸುವಂತೆ ಸಂಘವು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು. ಈ ಮನವಿಯ ಹಿನ್ನಲೆಯಲ್ಲಿ ಇದೀಗ ನಾಳೆ ಮತ್ತು ನಾಡಿದ್ದು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ ನೀಡಿದ್ದಾರೆ.