ತುಮಕೂರು: ರಾಜ್ಯದೆಲ್ಲೆಡ ಚಿರತೆ ದಾಳಿಯದ್ದೇ ಸುದ್ದಿ. ಹಳ್ಳಿ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳೂ ಚಿರತೆ ದಾಳಿಯಿಂದ ನಲುಗಿವೆ. ಕುರುಚಲು ಕಾಡುಗಳಲ್ಲಿ ವಾಸಿರುವ ಈ ಪ್ರಾಣಿಗಳು ಈಗ ನಾನಾ ಕಾರಣಕ್ಕೆ ಜನವಸತಿ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿವೆ.
ಹೀಗಾಗಿ ದನ, ನಾಯಿಗಳನ್ನು ಹೊತ್ತೊಯ್ಯುವ, ಮನುಷ್ಯರ ಪ್ರಾಣವನ್ನೇ ತೆಗೆಯುವ (Leopard death) ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ.
ಟ್ರಾನ್ಸ್‌ಫಾರ್ಮರ್‌ನಲ್ಲಿ ಸಿಲುಕಿದ ಚಿರತೆಇದರ ನಡುವೆ ಇಲ್ಲೊಂದು ಚಿರತೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದೆ. ಅಂದ ಹಾಗೆ ಇದು ಒಂದು ಚಿರತೆಯ ಸಾವಿನ ಸುದ್ದಿ. ಹಾಗಂತ ಇದನ್ನು ಯಾರೋ ಕೊಂದು ಹಾಕಿದ್ದಲ್ಲ. ಬದಲಾಗಿ, ಅದು ತಾನೇ ವಿದ್ಯುತ್ ಆಘಾತದ ಬಲೆಗೆ ಬಿದ್ದಿದೆ.
Laxmi News 24×7