Breaking News

ಸಿಎಂ ಆಗಮನ ವೇಳೆ ತರಾತುರಿಯಲ್ಲಿ ಮೆಟ್ಟಿಲಿಂಗ್ ರಸ್ತೆ ನಿರ್ಮಾಣ

Spread the love

ನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಕೆಸರಿನಿಂದ ಕೂಡಿದ ರಸ್ತೆಯನ್ನು ಪಿಡಬ್ಯುಡಿ ಇಲಾಖೆಯ ಅಧಿಕಾರಿಗಳು ಸಿಎಂ ಆಗಮಿಸುವ ಒಂದೂವರೆ ಗಂಟೆ ಮುಂಚಿತವಷ್ಟೇ ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆಯನ್ನು ನಿರ್ಮಿಸಲಾಯಿತು.

ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಮುಖ್ಯದ್ವಾರದಿಂದ ವೇದಿಕೆಗೆ ತೆರಳುವ ರಸ್ತೆಯು ಕೆಸರಿನಿಂದ ಕೂಡಿತ್ತು.

ಈ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮತಟ್ಟು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಜೇಡಿಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದರೂ ಕೆಸರುಗದ್ದೆಯಂತಾಗಿತ್ತು. ಇದರಿಂದ ಸಿಎಂ ಅಗಮಿಸುವ ವೇಳೆ ತೊಂದರೆಯಾಗಬಹುದು ಎನ್ನುವ ಉದ್ದೇಶದಿಂದ ಅಧಿಕಾರಿಗಳು ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆಯನ್ನು ನಿರ್ಮಿಸಲಾಯಿತು. ಈ ವೇಳೆ ಕ್ರೀಡಾಂಗಣದ ಒಳಾಂಗಣಕ್ಕೆ ಸರ್ಕಾರಿ ವಾಹನಗಳ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಪಿಡಬ್ಯುಡಿ ಎಇಇಗಳಾದ ರಾಜೇಶ್ ಮುನ್ಸಿ, ಸದಾಶಿವಮೂರ್ತಿ ಹಾಗೂ ಚಿನ್ನಣ್ಣ ರಸ್ತೆ ನಿರ್ಮಿಸಲು ಹರಸಾಹಸ ಪಟ್ಟರು. ಸಚಿವರ ಸೂಚನೆಯಂತೆ ವೇದಿಕೆ ಮುಂಭಾಗದ ಎರಡು ಬದಿಯಲ್ಲಿ ಹಾಕಲಾಗಿದ್ದ ಸಾಮಾನ್ಯ ಶಾಮಿಯಾನವನ್ನು ಕಳಚಿ ವಾಟರ್ ಫ್ರೂಪ್ ಶಾಮಿಯನ್ನು ಅಳವಡಿಸಲಾಯಿತು.


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ