Breaking News

ಶಿಕ್ಷಣಕ್ಕೆ ಮಠಗಳ ಕೊಡುಗೆ ಅಪಾರ: ಡಾ.ಎಸ್‌.ವಿದ್ಯಾಶಂಕರ

Spread the love

ಬೆಳಗಾವಿ: ‘ಶಿಕ್ಷಣ ರಂಗದಲ್ಲಿ ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಮಠ-ಮಾನ್ಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿವೆ. ಗ್ರಾಮೀಣ ಭಾಗದ ಬಡ ಮಕ್ಕಳ ಬದುಕು ರೂಪಿಸಿವೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ವಿದ್ಯಾಶಂಕರ ಶ್ಲಾಘಿಸಿದರು.

 

ಇಲ್ಲಿನ ಆರ್‌.ಎನ್‌.ಶೆಟ್ಟಿ ಪಾಲಿಟೆಕ್ನಿಕ್‌ ನಲ್ಲಿ ಲಿಂ. ಡಾ.ಶಿವಬಸವ ಸ್ವಾಮೀಜಿ 133ನೇ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಡಾ.ಶಿವಬಸವ ಸ್ವಾಮೀಜಿ ಅವರ ವಸ್ತು ಸಂಗ್ರಹಾಲಯ ಉದ್ಘಾಟನೆ ಮತ್ತು ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಾಗನೂರು ರುದ್ರಾಕ್ಷಿಮಠ ಕೈಗೊಂಡಿ ರುವ ಸೇವೆ ಶ್ಲಾಘನೀಯ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯ ರಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯು ವವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ, ಸಿವಿಲ್‌ ಮತ್ತು ಮೆಕ್ಯಾನಿಕಲ್‌ ವಿಭಾಗ ಗಳಿಗೆ ಹೆಣ್ಣು ಮಕ್ಕಳು ಹೆಚ್ಚಾಗಿ ಪ್ರವೇಶ ‍ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯಗಳನ್ನು ಕೇವಲ ಸರ್ಕಾರದ ಹಣದಿಂದ ನಡೆಸಲಾಗದು. ಅದಕ್ಕೆ ವಿದ್ಯಾರ್ಥಿಗಳ ಸಹಾಯವೂ ಬೇಕು’ ಎಂದು ಹೇಳಿದರು.

ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂ.ಎಸ್.ಚೌಗಲಾ, ಅಡಿವೆಪ್ಪ ಬೆಂಢಿಗೇರಿ, ರಮೇಶ ಜಂಗಲ್, ಪ್ರಭಯ್ಯ ಜಡಿಮಠ, ಪ್ರೇಮಕ್ಕ ಅಂಗಡಿ, ವಿಶ್ವೇಶ್ವರಿ ಹಿರೇಮಠ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗದುಗಿನ ಲಿಂ. ಶರಣಪ್ಪ ಬರಡಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಯಿತು. ವಾಗ್ದೇವಿ, ಕುಮುದಿನಿ ತಾಯಿ ಮತ್ತು ಸುಶೀಲಾ ಉಪ್ಪಿನ ಅವರನ್ನು ಸತ್ಕರಿಸಲಾಯಿತು.


Spread the love

About Laxminews 24x7

Check Also

ಒಂದು ಎಕರೆಗೆ 180 ಟನ್ ಕಬ್ಬು ಇಳುವರಿ,ಮಾಜಿ ಶಾಸಕ ಶಾಮ ಘಾಟಕೆಯವರ ಪ್ರಗತಿಪರ ಕೃಷಿ

Spread the love ಚಿಕ್ಕೋಡಿ:ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಜಮೀನಿನಲ್ಲಿ ಎಕರೆಗೆ 180 ಟನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ