Breaking News

ವೇದಿಕೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಶ್ರೀ ರಾಮುಲು..!?

Spread the love

ಳ್ಳಾರಿ: ಬಾಯ್ತಪ್ಪಿ ಎಲ್ಲರೂ ಒಮ್ಮೆಯಾದರೂ ಏನನ್ನಾದರು ಮಾತನಾಡಿರುತ್ತಾರೆ. ನಾಯಕರಾದವರು ಬಾಯ್ತಪ್ಪಿ ಮಾತನಾಡಿದರೆ ಮುಗಿದೇ ಹೋಯಿತು! ಎದುರಾಳಿ ಪಕ್ಷದವರು, ವಿರೋಧಿಗಳು, ಎಲ್ಲರೂ ಸೇರಿ ಇದನ್ನು ಖಂಡಿಸುತ್ತಾರೆ. ಆದರೆ ಇಲ್ಲಿ ಸಚಿವ ಶ್ರೀರಾಮುಲು, ವೇದಿಕೆ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಉಪಸ್ಥಿತರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ಅಷ್ಟೇ ಸಾಲಲ್ಲ ಎಂದು ತಾವು ಯುವಕನಾಗಿದ್ದಾಗ ಮಾಡುತ್ತಿದ್ದ ಗೂಂಡಾಗಿರಿಯ ಬಗ್ಗೆಯೂ ಹೇಳಿದ್ದಾರೆ.

ಸಚಿವ ಶ್ರೀ ರಾಮುಲು, ಬಳ್ಳಾರಿಯ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ರಾಮುಲು, ಹಾಸ್ಯ ಭರಿಸತವಾಗಿ ಹಳೆ ಕ್ಷಣಣಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇವರ ಹಳೆ ಕಥೆಗಳನ್ನು ಕೇಳಿ ವಿದ್ಯಾರ್ಥಿಗಳು ನಗೆಗಡಲಲ್ಲಿ ತೇಲಾಡಿದ್ದಾರೆ.

‘ಓದಿನಲ್ಲಿ ನಾನು ಲಾಸ್ಟ್ ಬೇಂಚ್ ಸ್ಟೂಡೆಂಟ್. ಟೀಚರ್​ಗಳನ್ನು ಕಿಚಾಯಿಸುತ್ತಿದ್ದೆ. ರಾಮುಲು ಏನ್ ಲೇ ನಿಂಗ್ ಯಾವ ಭಾಷನೂ ಸರಿಯಾಗಿ ಬರೋದಿಲ್ಲ ಅಂತಾ ನನಗೆ ಬೈತಿದ್ರು. ನೀನ್​ ಯಾವ್ ಸೂ*‌ ಮಗಲೇ ನಿನಗೆ ಏನು ಬರಲ್ಲ ಹೆಂಗ್ ಪಾಸಾದೇ’ ಎಂದು ಶಿಕ್ಷಕರು ಕೇಳುತ್ತಿದ್ದರು’ ಎಂದು ತಮ್ಮ ಬಾಲ್ಯದ ದಿನಗಳನ್ನು ಶ್ರೀ ರಾಮುಲು ನೆನಪಿಸಿಕೊಂಡರು.

ಇನ್ನು ಕಾಲೇಜು ದಿನಗಳಲ್ಲಿ ಮಾಡಿದ್ದ ತುಂಟಾಟವನ್ನು ನೆನೆಸಿಕೊಂಡ ಸಚಿವರು ‘ನಾನು ಕಾಪಿ ಹೊಡೆಯುದ್ರಲ್ಲಿ ಪಿಎಚ್‌ಡಿ ಮಾಡಿದ್ದೇನೆ. ಲಾಸ್ಟ್ ಬೇಂಚಲ್ಲಿ ಕುಳಿತು ಎಲ್ಲರಿಗೂ ಕಾಡಿಸುತ್ತಿದ್ದೆ. ಅಷ್ಟೇ ಅಲ್ಲ, ನಾನು ಕಾಲೇಜಿನಲ್ಲಿ ಗುಂಡಾಗಿರಿ ಮಾಡಿದ್ದೇನೆ. ನಾನು ಓದಿನಲ್ಲಿ ಮುಂದೆ ಬರ್ಬೇಕು ಅಂತಾ ಬಾಳ ಶಿಕ್ಷಕರು ಹೊಡೆದ್ರೂ ನಂಗೆ ತಲೆಗೆ ವಿದ್ಯೆ ಹೋಗಲಿಲ್ಲ. ನಾನು ಬಡವರ ಪರ ನಿಂತು‌ ಗೂಡಾಗಿರಿ ಮಾಡಿದ್ದೇನೆ. ನಾನು ಭಾರಿ ಬುದ್ಧಿವಂತ ಎಂದು ತಿಳಿದುಕೊಳ್ಳಬೇಡಿ, ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್.

ನಾನು ಗೂಂಡಾಗಿರಿ ಮಾಡುತ್ತಿದ್ದೆ, ಬಹಳ ಜಗಳ ಮಾಡುತ್ತಿದ್ದೆ. ನಾನು ಬಡವರಿಗೆ ತೊಂದರೆ ಮಾಡಿದಾಗ ಮಾತ್ರ ಗುಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದ್ದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೆ ಹೋಗಿದ್ದೆ’ ಎಂದು ತಾವು ಯುವಕರಾಗಿದ್ದಾಗ ಮಾಡಿದ್ದ ಕೆಲಸಳನ್ನು ನೆನೆಸಿಕೊಂಡರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ