ಮುಂಬಯಿ: ಆಸ್ತಿ ಆಸೆಗಾಗಿ ಹೆತ್ತ ತಾಯಿಯನ್ನೇ ಬೇಸ್ ಬಾಲ್ ಬ್ಯಾಟ್ ನಿಂದ ಹೊಡೆದು ಕೊಂದು ನದಿಗೆಸೆದ ಘಟನೆ ನೆರೆಯ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ವೀಣಾ ಕಪೂರ್ (74) ಹತ್ಯೆಯಾದ ದುರ್ದೈವಿ ಮಹಿಳೆ.
ಕೃತ್ಯಕ್ಕೆ ಸಂಬಂಧಿಸಿ ಆಕೆಯ 43 ವರ್ಷದ ಮಗ ಮತ್ತು ಆತನ ಸ್ನೇಹಿತನನ್ನು ಜುಹು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಜುಹು ಪೊಲೀಸ್ ಠಾಣೆಗೆ ಮಹಿಳೆ ಕಾಣೆಯಾಗಿರುವ ಕುರಿತು ದೂರು ಬಂದಿದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೊದಲು ಮಗನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ, ಈ ವೇಳೆ ತನ್ನ ತಾಯಿಯನ್ನು ಬೇಸ್ ಬಾಲ್ ಬ್ಯಾಟ್ ನಿಂದ ತಲೆಗೆ ಹೊಡೆದು ಕೊಂದು ಬಳಿಕ ರಾಯಗಢ ಜಿಲ್ಲೆಯ ಮಾಥೆರಾನ್ ಬಳಿ ನದಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮನೆಯಲ್ಲಿ ಈ ಹಿಂದೆಯೂ ಆಸ್ತಿ ವಿಚಾರಕ್ಕಾಗಿ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
“ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿ ವಶಕ್ಕೆ ಪಡೆದಿದ್ದಾರೆ.
Laxmi News 24×7