Breaking News

ಳಕಲ್ ಸೀರೆ ಫ್ಯಾಶನ್ ಶೋಗೆ ಫುಲ್ ಫಿದಾ ಆದ ಕುಂದಾನಗರಿ ಜನ

Spread the love

ಚಿಕ್ಕ ಬಟ್ಟೆಗಳನ್ನು ಧರಿಸಿ ಫ್ಯಾಶನ್ ಶೋದಲ್ಲಿ ಯುವಕ-ಯುವತಿಯರು ಹೆಜ್ಜೆ ಹಾಕುವುದನ್ನು ಎಲ್ಲರೂ ನೋಡಿರುತ್ತಿರಿ. ಆದರೆ ನಮ್ಮ ಬೆಳಗಾವಿಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಅದರಲ್ಲಿಯೂ ಇಳಕಲ್ ಸೀರೆಗಳ ನಾನಾ ತರಹದ ಡಿಸೈನ್ ಬಟ್ಟೆಗಳನ್ನು ತೊಟ್ಟು ರ್ಯಾಂಪ್ ಮೇಲೆ ಸ್ಪರ್ಧಾಳುಗಳು ಹೆಜ್ಜೆ ಹಾಕಿ ಎಲ್ಲರನ್ನು ಆಕರ್ಷಿಸಿದರು.

ಬ್ಬರಿಗಿಂತ ಒಬ್ಬರು ಸಾಂಪ್ರದಾಯಿಕ ಶೈಲಿಯಲ್ಲಿ ಫುಲ್ ಮಿಂಚಿಂಗ್..ಇಳಕಲ್ ಸೀರೆ, ಇಳಕಲ್ ಕುರ್ತಾ, ಇಳಕಲ್ ಧೋತರ, ಇಳಕಲ್ ಚೂಡಿದಾರ್ ಸೇರಿ ಇನ್ನಿತರ ಇಳಕಲ್ ಡ್ರೆಸ್‍ಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವುದು. ಹೌದು ನೀವು ನೋಡುತ್ತಿರುವ ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ನಗರದಲ್ಲಿ ಸೆರೆಂಡಿಪಿಟಿ 22 ಫ್ಯಾಶನ್ ಶೋ ಮತ್ತು ಛಾಯಾಚಿತ್ರಗಳ ಪ್ರದರ್ಶನದಲ್ಲಿ.

ಖ್ಯಾತ ಫ್ಯಾಶನಲ್ ಶೋ ಆಯೋಜಕರು ಮತ್ತು ಡಿಸೈನರ್ ಬೆಳಗಾವಿಯ ನವನೀತ್ ಪಾಟೀಲ್ ಈ ವಿನೂತನ ಫ್ಯಾಶನ್ ಶೋವನ್ನು ಆಯೋಜಿಸಿದ್ದಾರೆ. ಡಿಸೆಂಬರ್ 1ರವರೆಗೂ ಇದು ನಡೆಯಲಿದೆ. ಈ ಬಗ್ಗೆ ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿರುವ ಆಯೋಜಕ, ಡಿಸೈನರ್ ನವನೀತ್ ಪಾಟೀಲ್ ನಮ್ಮ ದೇಶಿಯ ಇಳಕಲ್ ಸೀರೆಗಳನ್ನು ಫ್ಯಾಶನ್ ಲೋಕದಲ್ಲಿ ತೋರಿಸಬೇಕು ಎಂದು ಉದ್ದೇಶದಿಂದ ಆಯೋಜಿಸಿದ್ದೇವೆ. ಎಲ್ಲ ಡಿಸೈನ್‍ಗಳು ಬಹಳ ಸುಂದರವಾಗಿವೆ. ಎಲ್ಲರೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಈ ಡಿಸೈನ್‍ಗಳನ್ನು ಕಣ್ತುಂಬಿಕೊಳ್ಳಬಹುದು ಎಂದು ಕೇಳಿಕೊಂಡರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ