Breaking News

ಬಿಜೆಪಿಯಿಂದ ನೀವು ಇದ್ದೀರಿ ಬಿಜೆಪಿ ಇಲ್ಲದೆ ಇದ್ದರೆ ನೀವು ಜೀರೋ.ಯತ್ನಾಳ್ ಹೆಂಡ್ಯಾಗಿನ ಹುಳಾ

Spread the love

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.‌ ಇದೀಗ ಉಚ್ಚಾಟಿತ ಅಭ್ಯರ್ಥಿಗಳು ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಟ್ಲರ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ಇಲ್ಲಿದೆ ಡಿಟೇಲ್ಸ್.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹುಲಿನು ಅಲ್ಲ ಹೆಬ್ಬುಲಿನು ಅಲ್ಲ ಹೆಂಡ್ಯಾಗಿನ ಹುಳಾ ಬಂಡಲ್ ರಾಜ ಇದ್ದಾರೆ ಬಂಡಲ್ ಉಳ್ಳಿಸಿಕೊಂತ ಹೊಂಟೀದಾರೆ ಎಂದು ರವಿ ಬಗಲಿ ಹಾಗೂ ರಾಜು ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಹಲವು ಮುಖಂಡರು ಬಸನಗೌಡ ಪಾಟೀಲ ಹಿಟ್ಲರ್ ಸಂಸ್ಕೃತಿ ತರುತ್ತಿದ್ದಾರೆ. ಎಲ್ಲರ ತಲೆ ಮೇಲೆ ಕೈ ನಮಗೆಲ್ಲ ಟಿಕೆಟ್ ತಪ್ಪಲು ಜಿಲ್ಲಾಧ್ಯಕ್ಷರೇ ಕಾರಣ ಆರ್ ಎಸ್ ಪಾಟೀಲ ಯತ್ನಾಳ ಕೈಗೊಂಬಿಯಾಗಿ ಕೆಲಸ ಮಾಡಿದ್ದಾರೆ.

ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವುದಾದರೆ ಮಾತ್ರ ಈ ಹುದ್ದೆಯಲ್ಲಿ ಮುಂದುವರೆಯಿರಿ ಬಸನಗೌಡ ಪಾಟೀಲ ಒಬ್ಬ ಹಿಟ್ಲರ್ ಇದೆ ಬಸನಗೌಡ ಪಾಟೀಲ ಎಷ್ಟು ಬಾರಿ ಪಕ್ಷ ಬಿಟ್ಟು ಹೋಗಿದ್ದಾರೆ ಎಲ್ಲರಿಗೂ ಗೊತ್ತು ಎಂದು ಹರಿಹಾಯ್ದರು.

ಬಸನಗೌಡ ಪಾಟೀಲ ಯತ್ನಾಳ್ ಅವರೇ ಕೇವಲ 9 ಜನರನ್ನು ಅರಿಸಿದ್ದೀರಿ ನಿಮ್ಮ ಯೋಗ್ಯತೆ ಜನ ದೇವರ ಹಿಪ್ಪರಗಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿಯಿಂದ ನೀವು ಇದ್ದೀರಿ ಬಿಜೆಪಿ ಇಲ್ಲದೆ ಇದ್ದರೆ ನೀವು ಜೀರೋ. ಅಸಮರ್ಥ ಜಿಲ್ಲಾಧ್ಯಕ್ಷರ ಅವಧಿ ಮುಗಿದಿದೆ ಪಕ್ಷದ ನಾಯಕರು ಇವರನ್ನು ಕೂಡಲೇ ತೆಗೆದು ಹಾಕಿ ಬೇರೆ ಸಮರ್ಥ ನಾಯಕನನ್ನು ಜಿಲ್ಲಾಧ್ಯಕ್ಷರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸಂಘಟನೆ ಮಾಡುವಲ್ಲಿ ಅಸಮರ್ಥರಿರುವುದನ್ನು ನೀವೇ ತೋರಿಸಿಕೊಂಡಿದ್ದೀರಿ ಬಹಳಷ್ಟು ಕಾರ್ಯಕರ್ತರು ನಮ್ಮನ್ನು ಕೇಳುತ್ತಿದ್ದಾರೆ


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ