Breaking News

ಬ್ಯಾಂಕಾಕ್ ದೇಶದಲ್ಲಿ ಬೆಳಗಾವಿಯ ಕೀರ್ತಿಯನ್ನು ಈ ನೃತ್ಯಗಾರರು ಹೆಚ್ಚಿಸಿದ್ದಾರೆ.

Spread the love

ಬ್ಯಾಂಕಾಕ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಚಾಂಪಿಯನ್‍ಶಿಪ್ IIGF  2022ರಲ್ಲಿ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಒಳ್ಳೆಯ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

265 ಸ್ಪರ್ಧಿಗಳಲ್ಲಿ ಅಗ್ರ 20ನೇ ಸ್ಥಾನಕ್ಕೆ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಅರ್ಹತೆ ಪಡೆದಿದ್ದಾರೆ. ಅಗ್ರ 20ರ 2ನೇ ಸುತ್ತಿನಲ್ಲಿ ಬ್ಯಾಂಕಾಕ್‍ನ ಪಟ್ಟಾಯದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಗೆಲುವಿಗೆ ಸುಲಭದ ದಾರಿಯಿಲ್ಲ, ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡು ಹೋರಾಡಿ ಗೆಲ್ಲಬೇಕು ಎಂಬ ಗಾದೆಯಂತೆ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಕೇವಲ ಎರಡು ತಿಂಗಳು ಕಠಿಣ ಅಭ್ಯಾಸ ಮಾಡಿ ಯಶಸ್ವಿಯಾಗಿದ್ದಾರೆ.

ನೃತ್ಯ ನಿರ್ದೇಶಕ ಮಹೇಶ್ ಜಾಧವ್ ಅವರು ಈ ಎಲ್ಲ ನೃತ್ಯಗಾರರಿಗೆ ತರಬೇತಿ ನೀಡಿದ್ದಾರೆ. ಪಾರ್ಥ ಪ್ರಕಾಶ ಗೊಂಬರೆ, ಪ್ರೇರಣಾ ಪ್ರಕಾಶ ಗೊಂಬಾರೆ, ಸೇಜಲ್ ಸದಾಶಿವ ಖಾನದಾಳೆ, ವೈಷ್ಣವಿ ಮಹೇಂದ್ರ ಮಾಳಗಿ, ಮಹಿ ಮಹೇಂದ್ರ ಮಾಳಗಿ, ಅಶ್ಮಿತಾ ಗೋಪಾಲ್ ಕಳ್ಳಿಮನಿ, ಸಂಜನಾ ಸಂತೋμï ಚವ್ಹಾಣ್, ಸಾನ್ವಿ ಅಮಿತ್ ಮುಂಗಾರೆ, ಕೃತಿಕಾ ಮಹಾದೇವ ಗಾವಡೆ, ಪ್ರಥಮೇಶ್ ಅಶೋಕ್ ಮಿಸಾಲ್, ಮಹರ್ಷಿ ಮಹಾರುದ್ರ ಶೇಖನವರ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು 2018ರಲ್ಲಿ ಸ್ಪೇನ್ ನಡೆದ ಸ್ಪರ್ಧೆಯಲ್ಲಿ 10ನೇ ಸ್ಥಾನ, 2018-ದುಬೈ, ಕಂಚಿನ ಪದಕ, 2019-ಚಿನ್ನದ ಪದಕ, 2021-ಚಿನ್ನದ ಪದಕ, 2022-ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಬೆಳಗಾವಿಯ ಕೀರ್ತಿಯನ್ನು ಈ ನೃತ್ಯಗಾರರು ವಿದೇಶದಲ್ಲಿಯೂ ಹೆಚ್ಚಿಸಿದ್ದಾರೆ.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಏಳು ಆರೋಪಿಗಳ ಪೈಕಿ ಇಬ್ಬರಿಗೆ ಶ್ಯೂರಿಟಿ ಸಿಕ್ಕಿಲ್ಲ.

Spread the loveಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿ ಜಾಮೀನು ಪಡೆದಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ