Breaking News

2000 ಕಿಮೀ ಜಾಗೃತಿ ಜಾಥಾ ನಡೆಸಲು ಮುಂದಾದ ಮಾದಿಗ ಸಮಾಜ

Spread the love

ಮಾದಿಗ ಸಮುದಾಯದ ಒಳಮೀಸಲಾತಿಗಾಗಿ ಹಾಗೂ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ೨೦ ದಿನಗಳ ಕಾಲ ೨೦೦೦ ಕಿಮೀ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ ಡಾ. ಪ್ರಶಾಂತರಾವ ಐಹೊಳೆ ತಿಳಿಸಿದರು.

ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಮಾದಿಗ ಸಮುದಾಯದ ಒಳಮೀಸಲಾತಿಗಾಗಿ ಹಾಗೂ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ರಹತ್ ಜಾಥಾವನ್ನು ಹಮ್ಮಿಕೊಂಡು, ನಮ್ಮ ಬೇಡಿಕೆ ಸರ್ಕಾರದ ಮುಂದೆ ತರುತ್ತೇವೆ .ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿಗಾಗಿ ಮಾದಿಗ ಸಮುದಾಯದ ಎಲ್ಲ ವಕ್ಕೂಟ ಸಂಘಗಳ ಸದಸ್ಯರು ಸೇರಿ, ಸುಮಾರು ೨೦ ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಬೈಕ್ ಜಾಥಾ ಇಟ್ಟುಕೊಂಡಿದ್ದೇವೆ, ಸುಮಾರು ೨೦೦೦ ಕೀ ಮೀ ವರೆಗೆ ಜಾಥಾ ಯಾತ್ರೆ ಇದ್ದು, ಉತ್ತರ ಕರ್ನಾಟಕದ ೧೩ ಜಿಲ್ಲೆಗಳಿಂದಲೂ ಜನ ಬರುತ್ತಾರೆ, ಪ್ರತಿ ಗ್ರಾಮ ಹಾಗೂ ತಾಲೂಕಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ಕರ್ನಾಟಕ ರಾಜ್ಯ ಮಾದಿಗ ಸಂಘದ ಅಧ್ಯಕ್ಷರಾದ ಮುತ್ತಣ್ಣ ಬೆನ್ನುರ ಮಾತನಾಡಿ, ಒಟ್ಟು ಪರಿಶಿಷ್ಟ ಜಾತಿಯಲ್ಲಿರುವ ೧೦೧ ಉಪಜಾತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕು, ಹಿಂದುಳಿದ ವರ್ಗದಲ್ಲಿ ಇರುವ ಹಾಗೆ ಇಲ್ಲಿಯೂ ಕೂಡಾ ಒಳಮೀಸಲಾತಿ ಜಾರಿಯಾಗಲಿ, ಅದು ಬೆಳಗಾವಿಯಲ್ಲಿ ನಡೆಯುವ ಈ ಚಳಿಗಾಲದ ಅಧಿವೇಶನದಲ್ಲಿ ಆಗಬೇಕು, ಇಲ್ಲವಾದರೆ ೧೪ ಡಿಸೆಂಬರ್ ರಂದು ನಡೆಯುವ ಧರಣಿ ನಿರಂತರವಾಗಿ ನಡೆಯುವಂತೆ ಆಗುತ್ತದೆ ಎಂದು ಹೇಳಿದರು.

ಇನ್ನು ಡಿಎಸ್‌ಎಸ್ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದರೋಳಿ ಮಾತನಾಡಿ, ಈಗಾಗಲೇ ಈ ವಿಷಯದ ಕುರಿತಾಗಿ ೨೦೧೭ ರಲ್ಲೇ ಬ್ರಹತ ಪ್ರಮಾನದ ಹೋರಾಟ ಮಾಡಿದ್ದು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡುತ್ತಾರೆ ಎಂಬ ಕನಸು ಇತ್ತು, ಕೊನೆ ಗಳಿಗೆಯಲ್ಲಿ ಅದು ಹುಸಿಯಾಯಿತು, ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಬೇಕೋ ಅದನ್ನು ಆ ಚುನಾವಣೆಯಲ್ಲಿ ಮಾಡಿದ್ದೇವೆ, ಈ ಭಾರಿ ಬೈಕ್ ಜಾಥಾದಲ್ಲಿ ಹಾಗೂ ಅಧಿವೇಶನದ ಧರಣಿ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದೇ ಇದ್ದರೇ, ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಈ ಸುದ್ದಿಗೋಷ್ಟಿಯಲ್ಲಿ ಮಾದಿಗ ಸಮುದಾಯದ ಸದಸ್ಯರು,ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ