Breaking News

ಕನ್ನಡದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾನೂನು ಜಾರಿಯಾಗಲಿ

Spread the love

ನ್ನಡ, ಕನ್ನಡಿಗ ಮತ್ತು ಕರ್ನಾಟಕ ವಿಷಯದಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022 ಸಿದ್ಧ ವಾಗಿದ್ದು, ಈ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ.

ಕನ್ನಡ ಅಭಿವೃದ್ದಿ ಪ್ರಾಧಿ ಕಾರ 2021ರಲ್ಲಿ ರೂಪಿಸಿದ ಮಸೂದೆಯನ್ನು ಕರ್ನಾಟಕ ಕಾನೂನು ಆಯೋಗಕ್ಕೆ ಕಳಿಸಿ ಸೂಕ್ತ ಸಲಹೆ ಪಡೆದು ಈಗ ಕರಡು ರೀತಿಯಲ್ಲಿ ಅಣಿಯಾಗಿದೆ.

ಈಗಾಗಲೇ ಸದನಲ್ಲಿ ಮಂಡನೆಯಾಗಿರುವ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022’ರಲ್ಲಿದ್ದ ದಂಡ ವಿಚಾರ, ಜಾರಿ ನಿರ್ದೇಶನ ವ್ಯವಸ್ಥೆ ಅಂಶಗಳಲ್ಲಿ ಲೋಪವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮಸೂದೆ ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದ್ದು ಆ ದೃಷ್ಟಿಯಿಂದ ಮಸೂದೆಯನ್ನು ಒರೆಗೆ ಹಚ್ಚಬೇಕು ಎಂಬ ಮಾತುಗಳು ಕೇಳತೊಡಗಿವೆ. ಸರಕಾರವೂ ಈ ನಿಟ್ಟಿನಲ್ಲಿ ಮುಕ್ತವಾಗಿದೆ. ಹಠಕ್ಕೆ ಬಿದ್ದು ಮಸೂದೆ ಅನುಮೋದಿಸದಿರಲು ನಿರ್ಧರಿಸಿದೆ.

ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಕನ್ನಡ ಭಾಷೆ, ನೆಲ, ಜಲದ ಜತೆಗೆ ಕನ್ನಡಿಗ, ಕನ್ನಡತನವನ್ನು ಬಲಗೊಳಿಸಲು “ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಮಸೂದೆ 2022′ ಸಂಪೂರ್ಣ ಸಿದ್ಧವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

ಈ ಮಸೂದೆಯ ಕುರಿತು ಸಾರ್ವ ಜನಿಕವಾಗಿ ಚರ್ಚೆ ನಡೆದು ಬಿಟ್ಟು ಹೋಗಿರುವ ಅಂಶಗಳು ಸೇರಿ ಸಮಗ್ರ ವಾಗಬೇಕು. ಹೀಗಾಗಿ ಇದರ ಕುರಿತ ಚರ್ಚೆ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೇ ಆರಂಭವಾಗಬೇಕು ಎಂದು ಸಲಹೆ ನೀಡಿದ್ದರು. ಇದರ ಭಾಗವಾಗಿಯೇ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚರ್ಚೆಯೂ ನಡೆದಿತ್ತು.

ಹಾವೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಹಿರಿಯ ಕಾದಂಬರಿ ಕಾರ ಎಸ್‌.ಎಲ್‌. ಭೈರಪ್ಪ ಮತ್ತಿತರರರು ಭಾಗವಹಿಸಿ ಮಸೂದೆಯಲ್ಲಿನ ಲೋಪದೋಷ ಹಾಗೂ ಅಡಕವಾಗಬೇಕಾದ ಅಂಶಗಳ ಬಗ್ಗೆ, ಒಟ್ಟಾರೆ ಮಸೂದೆ ಗಟ್ಟಿಗೊಳ್ಳಬೇಕಾದ ಅಂಶಗಳ ಒರೆಗೆ ಹಚ್ಚಿದರು.

ಕಡ್ಡಾಯವಾಗಲಿ
ಈ ಮಸೂದೆಯಲ್ಲಿ ಕನ್ನಡದ ಜಾರಿಗೆ “ಪ್ರಾಮುಖ್ಯ’ ಎಂಬ ಪದದ ಬದಲಾಗಿ “ಕಡ್ಡಾಯ’ ಎಂದಾಗಬೇಕು ಹಾಗೂ ಜಗದ ಎಲ್ಲ ಕನ್ನಡಿಗರು ಎಂಬ ಅರ್ಥದಲ್ಲಿ ವಿಸ್ತೃತಗೊಳ್ಳಬೇಕು ಎಂಬ ಮಾತು ಕೇಳಿಬಂದಿದೆ.

ಕೆಲವು ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಪ್ರಸ್ತಾಪ ಮಸೂದೆಯಲ್ಲಿ ದ್ದರೂ ಅದು ಕೇವಲ ಜಿಲ್ಲಾ ನ್ಯಾಯಾಲಯ ಗಳಿಗೆ ಸೀಮಿತವಾಗಿದೆ. ಅದನ್ನು ಇತರ ನ್ಯಾಯಾಲಯಗಳಿಗೂ ವಿಸ್ತರಿಸಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ