ಚಿತ್ರದುರ್ಗ, ಅಕ್ಟೋಬರ್ 20 : 2023ರ ವಿಧಾನಸಭಾ ಚುನಾವಣೆ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಹಿಂದೆ ಮಾಡಿದ ತಪ್ಪಗಳನ್ನು ಮತ್ತೆ ಮಾಡಬೇಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಕಾರ್ಯಕರ್ತರಿಗೆ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರ 68ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭಕೋರಿ ಮಾತನಾಡಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಗ್ಯಾಸ್, ಪೆಟ್ರೋಲಿಯಂ, ಬೆಲೆ ಏರಿಕೆಯಾಗುತ್ತಿದೆ. ತಿನ್ನುವ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ತಂದಿದ್ದಾರೆ. ಬರುವ ಮುಂದಿನ ಚುನಾವಣೆಯಲ್ಲಿ ಜಾತಿ, ಗೀತಿ ನೋಡಬೇಡಿ, ಗೋವಿಂದಪ್ಪಗೆ ವೋಟು ಹಾಕ್ತಿರಾ ಅಲ್ವಾ ಎಂದರು. ವಿಧಾನಸಭೆಯಲ್ಲಿ ಗೋವಿಂದಪ್ಪ ಇರಬೇಕು ಕಾರ್ಯಕರ್ತರಿಗೆ ಕರೆ ನೀಡಿದರು.