ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಕೆ.ವಿಜಯ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕುಖ್ಯಾತ ದಂತಚೋರ, ಕಾಡುಗಳ್ಳ ವೀರಪ್ಪನ್ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಜಯ್ ಕುಮಾರ್ ಪ್ರಸ್ತುತ ತಮ್ಮ ವಾಸ್ತವ್ಯವನ್ನು ದಿಲ್ಲಿಯಿಂದ ಚೆನ್ನೈಗೆ ಬದಲಾಯಿಸಿಕೊಂಡಿದ್ದಾರೆ.
ನಿವೃತ್ತಿಗೆ ಖಾಸಗಿ ವಿಚಾರಗಳನ್ನು ಕಾರಣವಾಗಿ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯ್ ಕುಮಾರ್ ಮುಖ್ಯವಾಗಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸು ವುದಕ್ಕೆ, ಜಮ್ಮುಕಾಶ್ಮೀರದ ಉಗ್ರವಾದದ ನಿರ್ನಾಮಕ್ಕೂ ಸಲಹೆ ನೀಡಿದ್ದರು.