Breaking News

ಮುಸ್ಲಿಮರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಿದೆ: ಯತ್ನಾಳ್

Spread the love

ಮುಸ್ಲಿಮರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆಯನ್ನು ನಡೆಸಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್‌ರವರು, ಮುಸ್ಲಿಮgನ್ನು 2ಎ ಮೀಸಲಾತಿ ತೆಗೆದು ಹಾಕಬೇಕು. ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರೆಡು ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ ಮುಸ್ಲಿಮ್‌ರನ್ನು 2ಎ ಮೀಸಲಾತಿಯಿಂದ ತೆಗೆದುಹಾಕಲು ತಯಾರಿ ನಡೆದಿz.ೆ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ, ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಾವು ಕೂಡ ಪುನರ್ ಪರಿಶೀಲನೆಗೆ ಸಿಎಂ ಅವರಿಗೆ ಹೇಳಿದ್ದೇವೆ. ಎರಡು ಕಡೆಗಳಲ್ಲಿ ಲಾಭ ಪಡೆಯುತ್ತಿರೋದನ್ನ ತೆಗೆದು ಉಳಿದ ಹಿಂದೂಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು. ಈ ಕುರಿತಂತೆ ಸಿಎಂ ಜೊತೆ ಚರ್ಚೆಯಾಗಿದೆ. ಪರಿವಾರದಿಂದಲೂ ಚರ್ಚೆಆಗಿದೆ. ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ. ಅಂತವರ ಎಲ್ಲ ಮೀಸಲಾತಿ ಸೌಲಭ್ಯ ರದ್ದುಪಡೆಸಬೇಕು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದರು. .

ಇದೇ ವೇಳೆ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನವನ್ನು ನೀಡುವ ಕುರಿತಂತೆ ಧ್ವನಿ ಎತ್ತಿದ ಅವರು, ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು.

ಬ್ರಾಹ್ಮಣರು ಕೇವಲ ಶೇಕಡಾ 2ರಿಂದ3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನ ಸೇರಿಸಬೇಕು, ಇದು ನನ್ನ ವಾದ. ಬಮುಸ್ಲಿಂರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲಾ ಎಂದರು. ಒಂದು ಜನಾಂಗದಷ್ಟಿರುವ ಮುಸ್ಲಿಂಮರು ಹೇಗೆ ಅಲ್ಪ ಸಂಖ್ಯಾತರಾಗ್ತಾರೆ ಎಂದು ಪ್ರಶ್ನೆ ಮಾಡಿದರು. ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನದ ಪರ ಮಾತನಾಡೋದು, ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ? ಅವರಿಗೆ ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಲಿ ಎಂದರು.

ಬಿಜೆಪಿಯಲ್ಲಿ ಸಿಎಂ ಆಗಲು 2500 ಕೋಟಿ ರೂಪಾಯಿ ನೀಡಬೇಕು ಎಂಬ ಹೇಳಿಕೆ ಕುರಿತಂತೆ ಮುಖ್ಯಮಂತ್ರಿ ಚಂದ್ರು ಆರೋಪ ಕುರಿತಂತೆ ಮತನಾಡಿ, ನನ್ನ ಹೇಳಿಕೆ ಮತ್ತೊಮ್ಮೆ ತಿರುಗಿಸಿ ನೋಡಿ. ನಾನು ಹೇಳಿದ್ದು ಏನಿದೆ ಎಂಬುದನ್ನು ನೋಡಿ ಎಂದ ಯತ್ನಾ¼.À ದೆಹಲಿ ಬೆಂಗಳೂರಿನಲ್ಲಿ ಕೆಲ ದಲ್ಲಾಳಿಗಳು ಇದ್ದಾರೆ. ದಲ್ಲಾಲಿಗಳು ಎಲ್ಲಾ ಪಕ್ಷದಲ್ಲಿದ್ದಾರೆ, ಅವರು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲಾ. ರಾಮದುರ್ಗದಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ದೆಹಲಿಯಲ್ಲಿ ಅವರಿವರನ್ನು ಭೇಟಿ ಮಾಡಿಸುತ್ತೇನೆ. 2 ಕೋಟಿ 3 ಕೋಟಿ ಕೊಡಿ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಕೆಲವರು ನಮಗೆ ಹೇಳಿದ್ದಾರೆ ಎಂದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ