Breaking News

ಅಪ್ಪು ʼಗಂಧದ ಗುಡಿʼ ಮೆಚ್ಚಿದ ಮೋದಿ: ಅಶ್ವಿನಿ ಪುನೀತ್‌ ಕುಮಾರ್‌ ಟ್ವೀಟ್‌ ಗೆ ಪ್ರತಿಕ್ರಿಯೆ

Spread the love

ಬೆಂಗಳೂರು: ಪವರ್‌ ಸ್ಟಾರ್‌ ಅಪ್ಪು ಅವರ ʼಗಂಧದ ಗುಡಿʼ ಟ್ರೇಲರ್‌ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದೆ. ಅಮೋಘ, ಅದ್ಭುತ ಜೀವ ವೈವಿಧ್ಯಮಯ ಜಗತ್ತಿನ ದೃಶ್ಯವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಅದ್ಧೂರಿ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು.

ಟ್ರೇಲರ್‌ ಬಿಡುಗಡೆಗೊಂಡ ಬಳಿಕ ಅಪ್ಪು ಅವರ ಡ್ರೀಮ್‌ ಪ್ರಾಜೆಕ್ಟ್‌ ʼಗಂಧದ ಗುಡಿʼಯ ಲಿಂಕ್‌ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್‌ ಮಾಡಿ ಟ್ವಿಟರ್‌ ನಲ್ಲಿ ಹಾಕಿದ್ದರು. ಅದಕ್ಕೆ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ನಮಸ್ತೆ ಮೋದಿ ಅವರೇ, ಇಂದು ತುಂಬಾ ಭಾವನಾತ್ಮಕ ದಿನ, ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ‌ʼಗಂಧದ ಗುಡಿʼ ಟ್ರೇಲರ್ ರಿಲೀಸ್‌ ಮಾಡಿದ್ದೇವೆ. ಅಪ್ಪು ಸದಾ ನಿಮ್ಮೊಂದಿಗಿನ ಮಾತುಗಳನ್ನು ಸ್ಮರಿಸುತ್ತಿದ್ದರು. ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು” ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಕನ್ನಡದಲ್ಲಿ “ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. #GandhadaGudi ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ