ಬೆಳಗಾವಿ ತಾಲೂಕಿನ ಕಾಕತಿಯ ಲಕ್ಷ್ಮೀ ನಗರದಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪ್‌ನ ಗಜಾನನ ಗವಾನೆ ಮಾನಸಿಕ ಅಸ್ವಸ್ಥನನ್ನು ಉಪಚರಿಸಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಹೌದು ಇಂದು ಶನಿವಾರ ಬೆಳಗಾವಿ ತಾಲೂಕಿನ ಕಾಕತಿಯ ಲಕ್ಷ್ಮೀನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಬೆತ್ತಲೆಯಾಗಿ ಓಡಾಡುವ ಮೂಲಕ ಅವಾಂತರ ಎಸಗಿದ್ದಾನೆ. ಈ ವೇಳೆ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪ್ ನ ಗಜಾನನ ಗವಾನೆ ಅವರಿಗೆ ಆ ಭಾಗದ ಮಹಿಳೆಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಮನೋಹರ ಶೇಖರಗೋಳ ಹಾಗೂ ಸುಹಾಸ್ ಲೋಹರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಗಜಾನನ ಗವಾನೆ, +
ಚರಂಡಿ ನೀರಿನಲ್ಲಿ ಮಲಗಿದ್ದ ಯುವಕನನ್ನು ಹಿಡಿದು ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆತನನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Laxmi News 24×7