Breaking News

ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್

Spread the love

ಬೆಳಗಾವಿ: ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್; ಹೆಂಡತಿ, ಮಗಳೇ ಹಂತಕರು
 ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಸುಧೀರ ಕಾಂಬಳೆ ಎಂಬುವವರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

 

ಮೃತ ಸುಧೀರ್ ಪತ್ನಿ ರೋಹಿಣಿ ಸುಧೀರ ಕಾಂಬಳೆ, ಪುತ್ರಿ ಸ್ನೇಹಾ ಹಾಗೂ ರೋಹಿಣಿಯ ಸ್ನೇಹಿತ ಅಕ್ಷಯ ಮಹಾದೇವ ವಿಠಕರ ಬಂಧಿತರು.

 ಸೆಪ್ಟಂಬರ್ 16 ಹಾಗೂ 17ರ ನಡುವಿನ ಅವಧಿಯಲ್ಲಿ ಕ್ಯಾಂಪ್ ನ ಮದ್ರಾಸ್ ಸ್ಟ್ರೀಟ್ ಪ್ರದೇಶದ ಮನೆ ನಂ. 31ಎ ನಲ್ಲಿ ಸುಧೀರ್ ಭಗವಾನದಾಸ್ ಕಾಂಬಳೆ ಎಂಬುವವರನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

 

ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಡೇಬಜಾರ್ ಎಸಿಪಿ ಹಾಗೂ ತಂಡದವರು ವೈಜ್ಞಾನಿಕ ವಿಧಾನಗಳನ್ನು ಬಳಸಿ ಮೂವರು ಆರೋಪಿತರನ್ನು ಬಂಧಿಸಿದ್ದಾರೆ.

 


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ