Breaking News

ಗೋಕಾಕ್ ತಾಲೂಕಿನ ಗೋಡಚಿನಮಲ್ಕಿ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಿಲಿಂಡರ್ ಸ್ಫೋಟ

Spread the love

ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟವಾಗಿ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳು ಸುಟ್ಟು ಕರಕಲಾಗಿರುವ ಘಟನೆ ಗೋಕಾಕ್‍ನ ವಿವೇಕಾನಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ.

ಗೋಕಾಕ್ ತಾಲೂಕಿನ ಗೋಡಚಿನಮಲ್ಕಿ ಗ್ರಾಮದದಿಂದ ಗೋಕಾಕ್‍ನ ವಿವೇಕಾನಂದ ನಗರದಲ್ಲಿ ಸ್ಥಳಾಂತರಗೊಂಡಿರುವ ಡಾ..ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹೌದು ಅಡುಗೆ ಮಾಡುತ್ತಿರುವಾಗ ಸಿಲಿಂಡರ್‍ನಿಂದ ಭಾರಿ ಶಬ್ದ ಕೇಳಿ ಬಂದಿದೆ. ತಕ್ಷಣವೇ ಅಡುಗೆ ಮಾಡುವವರು ಹೆದರಿ ಹೊರಗೆ ಓಡಿ ಬಂದಿದ್ದಾರೆ. ನಂತರ ಕೋಣೆಯ ತುಂಬಾ ಬೆಂಕಿ ಆವರಿಸಿತು ಇದ್ದರಿಂದ ಕೋಣೆಯ ಕಿಟಕಿ–ಬಾಗಿಲುಗಳು ಸುಟ್ಟು ಹೋಗಿದೆ. ಅಲ್ಲದೇ ಅಡುಗೆ ಸಾಮಗ್ರಿಗಳು, ದವಸ ಧಾನ್ಯಗಳು ಕೂಡ ಸುಟ್ಟು ಭಸ್ಮವಾಗಿವೆ.
 
ಶಾಲೆಯಲ್ಲಿರುವ ಅಗ್ನಿ ನಿಂದಿಸುವ ಗ್ಯಾಸ್‍ನಿಂದ ಅಗ್ನಿ ನಿಂದಿಸಲು ಪ್ರಯತ್ನಸಲಾಯಿತು. ಬಳಿಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಅಗ್ನಿ ಶಾಮಕ ದಳದ ಬಂದು ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸಿಲಿಂಡರ್‍ನ ರೆಗ್ಯುಲೇಟರ್ ಸಡಿಲಿಕೆ ಮತ್ತು ಪೈಪ್ ಲಿಕೇಜ ಆಗಿರುವುದೇ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಅಕ್ಕಿ, ಹಾಲಿನ ಪೌಡರ್, ಮಕ್ಕಳಿಗೆ ನೀಡಲು ಮಾಡಲಾದ ದೋಸೆ ಸೇರಿದಂತೆ ಪಾತ್ರೆಗಳು ಒಡೆದು ಹೋಗಿವೆ ಎಂದು ಮುಖ್ಯ ಗುರುಗಳಾದ ವಿಠಲ ಗುಡೇನ್ನವರ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ