ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಆವರಣದಲ್ಲಿ ಸ್ವಚ್ಛತೆ ಮಂಗಮಾಯವಾಗಿದೆ. ಜಿಲ್ಲೆಗೆ ಮಾದರಿ ಪಾಠ ಹೇಳಬೇಕಿದ್ದ ಜಿಲ್ಲಾಧಿಕಾರಿಗಳ ಕಚೇರಿ ಆವರಣವೇ ಈಗ ಕಸ ತುಂಬಿಕೊಂಡು ರೋಗಗ್ರಸ್ತವಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಎಂದರೆ ಅದಕ್ಕೆ ಅದರದ್ದೇ ಆದ ಗೌರವವಿದೆ. ಅಲ್ಲಿ ಜಿಲ್ಲೆಯ ಅನೇಕ ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಲ್ಲಿಗೆ ಬರುತ್ತಾರೆ. ಹಾಗಾಗಿ ಅದು ಜಿಲ್ಲೆಗೇ ಮಾದರಿಯಾಗಿರಬೇಕಾದದ್ದು ಸ್ವಾಭಾವಿಕ.
ಆದರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗ ಅಕ್ಷರಶಃ ಅವ್ಯವಸ್ಥೆಯ ಗೂಡಾಗಿದೆ. ಎಲ್ಲಂದರಲ್ಲಿ ಕಸವನ್ನು ಹಾಕಲಾಗಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಒಂದೆಡೆ ಒಡೆದ ಗಾಜನ್ನು ಹಾಕಲಾಗಿದ್ದು ಇನ್ನೊಂದೆಡೆ ನೀರನ್ನು ಕುಡಿದು ಬಾಟಲಿಗಳನ್ನು ಎಲ್ಲಂದರಲ್ಲಿ ಬಿಸಾಡಲಾಗಿದೆ. ಇನ್ನು ಕಚೇರಿಯಲ್ಲಿ ಕಸ ಹಾಕಲು ಇಟ್ಟಿದ್ದ ಡಸ್ಟ್‍ಬಿನ್‍ಗಳು ತುಂಬಿದ್ದು ಸೂಕ್ತ ವಿಲೇವಾರಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಏನೇ ಇರಲಿ ಜಿಲ್ಲೆಗೆ ಮಾದರಿಯಾಗಬೇಕಿದ್ದ ಡಿಸಿ ಕಚೇರಿ ಸಿಬ್ಬಂದಿ ಸ್ವಚ್ಛತೆಯನ್ನು ಮರೆತಿದ್ದು ವಿಪರ್ಯಾಸವೇ ಸರಿ.