Breaking News

PAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ

Spread the love

ಬೆಂಗಳೂರು: ಅಸೆಂಬ್ಲಿ ಚುನಾವಣೆಗೆ ಆರು ತಿಂಗಳಿರುವಾಗಲೇ ರಾಜ್ಯ ರಾಜಕೀಯ ಕಾವೇರಿದೆ. ಬಿಜೆಪಿ (BJP) ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡ್ತಿರುವ ಕಾಂಗ್ರೆಸ್ (Congress), ಈ ವಿಚಾರದಲ್ಲಿ ದಿನಕ್ಕೊಂದು ಅಸ್ತ್ರ ಪ್ರಯೋಗಿಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಲು ಪ್ರಯತ್ನ ನಡೆಸಿದೆ.

ಇಂದು ಯುಪಿಐ ಪೇಮೆಂಟ್ (UPI Payment) ಆಪ್ `ಪೇಟಿಎಂ” ಮಾದರಿಯಲ್ಲಿ `ಪೇ ಸಿಎಂ’ (PayCM) Poster ಪೋಸ್ಟರ್‌ಗಳನ್ನು ಅಂಟಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಚಾಟಿ ಬೀಸಿದೆ. ಇತ್ತ ಪೋಸ್ಟರ್ ಅಭಿಯಾನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಸರ್ಕಾರ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಸಿಸಿಬಿಗೆ (CCB) ವರ್ಗಾಯಿಸಿದೆ.

ಉದ್ಯೋಗಾಕಾಂಕ್ಷಿಗಳನ್ನು ಮುಂದಿಟ್ಟುಕೊಂಡು ಲಂಚ ತಗೊಳಿ. ಕೆಲಸ ಕೊಡಿ ಅಭಿಯಾನ ನಡೆಸಿದ್ದ ಕಾಂಗ್ರೆಸ್, ಇದೀಗ ಯುಪಿಐ ಪೇಮೆಂಟ್ ಆಪ್ `ಪೇಟಿಎಂ” ಮಾದರಿಯಲ್ಲಿ `ಪೇ ಸಿಎಂ’ ಪೋಸ್ಟರ್‌ಗಳನ್ನು ಸಿಎಂ ಓಡಾಡೋ ಕಡೆ ಅಂಟಿಸಿದೆ. ಸಿಎಂ ಬೊಮ್ಮಾಯಿ ಫೋಟೋ ಒಳಗೊಂಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ರೇ, ಇತ್ತೀಚಿಗಷ್ಟೇ ಕಾಂಗ್ರೆಸ್ ಆರಂಭಿಸಿದ್ದ `40% ಪರ್ಸೆಂಟ್ ಸರ್ಕಾರ್’ ವೆಬ್‍ಸೈಟ್ ಓಪನ್ ಆಗುತ್ತದೆ.

ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಈ ವೆಬ್‍ಸೈಟ್‍ನಲ್ಲಿ ದೂರು ಕೂಡ ನೀಡಬಹುದಾಗಿದೆ. `ಪೇ ಸಿಎಂ’ ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ. ಕೇವಲ ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ಬೆಳವಣಿಗೆ ಆಡಳಿತ ಪಕ್ಷವನ್ನು ತೀವ್ರ ಮುಜುಗರಕ್ಕೀಡುಮಾಡಿದೆ. ನಗರದ ಹತ್ತಕ್ಕೂ ಹೆಚ್ಚು ಕಡೆ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಅಂಟಿಸಿದ್ದರು. ಈ ಸಂಬಂಧ ಹಲವು ಠಾಣೆಗಳಲ್ಲಿ ಎಫ್.ಐ.ಆರ್ ದಾಖಲಾಗಿತ್ತು. 


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ