Breaking News

ಬೆಂಗಳೂರು: ಕಾರಿಗೆ ಬೈಕ್ ವಿಮೆ- ಅಪಘಾತವಾದಾಗ ಸತ್ಯಾಂಶ ಬಯಲು!

Spread the love

ಬೆಂಗಳೂರು, ಸೆಪ್ಟೆಂಬರ್ 20: ವಾಹನಗಳಿಗೆ ಇನ್ಸುರೆನ್ಸ್ (ವಿಮೆ)ಯನ್ನು ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ವಾಹನಗಳಿಗೆ ವಿಮೆಯನ್ನು ಮಾಡಿಸುವುದರಿಂದ ಅಪಘಾತವಾದ ಸಮಯದಲ್ಲಿ ಬಹಳಷ್ಟು ಅನುಕೂಲಗಳಿವೆ. ಆದರೆ ಖಾಸಗಿ ಕಂಪನಿ ವಿಮೆಯನ್ನು ಮಾಡಿಸುವ ಗ್ರಾಹಕರು ಎಚ್ಚರವಾಗಿರಬೇಕು.

ನಾಲ್ಕು ಚಕ್ರದ ವಾಹನದ ವಿಮೆ ಎಂದು ದ್ವಿಚಕ್ರ ವಾಹನ ವಿಮೆ ನೀಡಿ ವಂಚಿಸುತ್ತಿದ್ದವನನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ವಾಹನಗಳಿಗೆ ಇನ್ಸುರೆನ್ಸ್ ಮಾಡಿಸುವುದು ಪೊಲೀಸರ ದಂಡ ಪ್ರಯೋಗಕ್ಕೆ ಹೆದರಿಯಲ್ಲ. ವಿಮೆ ಮಾಡಿಸುವುದು ಜೀವ ಜೀವನಕ್ಕಾಗಿ ಎಂಬುದನ್ನು ಮನಗಾಣಬೇಕಿದೆ. ಕಾರಿನ ವಿಮೆಯನ್ನು ಮಾಡಿಸಿದರೇ ಅಪಘಾತ ಸಂಭವಿಸಿದ ಸಮಯದಲ್ಲಿ ಜೀವಕ್ಕೆ ಹಾನಿಯುಂಟು ಮಾಡಿದರೆ ಅಥವಾ ಕಾರು ಅಪಘಾತದಲ್ಲಿ ತುಂಬಾ ಡ್ಯಾಮೇಜ್ ಆಗಿದ್ದರೆ ರಿಪೇರಿ ಮಾಡಲು, ಪರಿಹಾರಕ್ಕೆ ವಿಮೆಯ ಮೊತ್ತವನ್ನು ಪಡೆಯಬಹುದಾಗಿದೆ.

 

ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಗ್ರಾಹಕರಿಗೆ ವಂಚನೆಯನ್ನು ಮಾಡುತ್ತಿದ್ದ ಆಸಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಚಕ್ರದ ವಾಹನದ ವಿಮೆ ಎಂದು ಹೇಳಿ ದ್ವಿಚಕ್ರ ವಾಹನದ ವಿಮೆಯನ್ನು ಮಾಡಿಸುವ ಮೂಲಕ ಗ್ರಾಹಕರಿಗೆ ವಂಚನೆಯನ್ನು ಮಾಡುತ್ತಿರುವುದು ಕಂಡು ಬಂದಿತ್ತು. ಇದರಿಂದ ಎಚ್ಚೆತ್ತ ಸೈಬರ್ ಪೊಲೀಸರು ಆರೋಪಿ ಧಾರವಾಡ ಮೂಲದ ಇರ್ಫಾನ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ