Breaking News

ಡಿಸೆಂಬರ್ ಅಧಿವೇಶನದ ವೇಳೆ ಮಲ್ಟಿ ಸೂಪರ್ ಸ್ಪೇಷಾಲಟಿ ಆಸ್ಪತ್ರೆ ಉದ್ಘಾಟನೆ: ಶಾಸಕ ಅನಿಲ ಬೆನಕೆ

Spread the love

ಬೆಳಗಾವಿ: ಡಿಸೆಂಬರ್ ಚಳಿಗಾಲ ಅಧಿವೇಶನದ ವೇಳೆಯಲ್ಲಿ ಮಲ್ಟಿ ಸೂಪರ್ ಸ್ಪೇಷಾಲಟಿ ಆಸ್ಪತ್ರೆಯ ಎರಡು ಮಹಡಿಗಳನ್ನು ಉದ್ಘಾಟನಾ ಮಾಡಲಿದ್ದೇವೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.

ಶನಿವಾರ ಭಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಅವರ ಜೊತೆ ಸಭೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ ನಲ್ಲಿ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದ್ದು, ಆ ವೇಳೆ ಬೆಳಗಾವಿ ನಗರದಲ್ಲಿ ಪ್ರಗತಿ ಹಂತದಲ್ಲಿ ಇರುವ ಮಲ್ಟಿ ಸೂಪರ ಸ್ಪೆಷಾಲಟಿ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.‌ ಸದ್ಯದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು. ‌

ಬಳ್ಳಾರಿ ಆಸ್ಪತ್ರೆಯಲ್ಲಿ ಆಗಿರುವ ಸಮಸ್ಯೆ ನಮ್ಮ ಜಿಮ್ಸ್ ಆಸ್ಪತ್ರೆಯಲ್ಲಿ ಆಗಬಾರದು. ಆಕ್ಸಿಜನ್ ತೊಂದರೆ ಆಗದಂತೆ ನೋಡಿಕೋಳ್ಳಬೇಕು, ವಿದ್ಯುತ್ ಸಮಸ್ಯೆ ಎದುರಾದಾಗ ಆಕ್ಸಿಜನ್ ಸಪ್ಲೈ ಮಾಡಲು ಜನರೇಟರ್ ರೇಡಿ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕಿಂತ ಮುಂಚೆ ಭಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಅವರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರತಿ ನಿತ್ಯ ದಾಖಲಾಗುವ ರೋಗಿಗಳ ಬಗ್ಗೆ ಮಾಹಿತಿ ಪಡೆದರು. ಪ್ರತಿ ನಿತ್ಯ ಓಪಿಡಿಯಲ್ಲಿ ಸಂಗ್ರಹವಾಗುವ ಹಣದ ಬಗ್ಗೆ ಮಾಹಿತಿ ಪಡೆದರು.

ಪ್ರತಿ ನಿತ್ಯ ಬಾಯೋ ಮೆಟ್ರಿಕ್ ಸಿಸ್ಟಮ್ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಬ್ಲಡ್ ಬ್ಯಾಂಕ್, ಎಕ್ಸರೆ ದಿನದ 24 ಗಂಟೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಬಿಮ್ಸ್ ನಿರ್ದೇಶಕ, ಹಳೆ ಕಟ್ಟಡಗಳ ದುರಸ್ತಿ ಆಗುತ್ತಿದೆ. ಹೊರ ರೋಗಿಗಳಿಗೆ ಊಟದ ಕೋಣೆ ನಿರ್ಮಾಣ ಮಾಡುತ್ತೇವೆ.ಆಸ್ಪತ್ರೆಯಲ್ಲಿ ಕುಡಿಯುವ ನೀರಿನ‌ ವ್ಯವಸ್ಥೆಯ ಮಾಡುತ್ತೇವೆ.
ರೋಗಿಗಳಿಗೆ ವೇಟಿಂಗ್‌ ರೂಮ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಬಳಿಕ ಶಾಸಕರು ಅಧಿಕಾರಿಗಳ ಜೊತೆ ಸೇರಿ ರೋಗಿಗಳಿಗೆ ನೀಡುವ ಊಟ ಪರಿಶೀಲಿಸಿದರು. ಆಕ್ಸಿಜನ್ ಸಪ್ಲೈಗೆ ಬಳಸುವ ಜನರೇಟರ್ ಗಳನ್ನು ಪರಿಶೀಲಿಸಿದರು, ಹೊಸದಾಗಿ ನಿರ್ಮಾಣ ಆಗುತ್ತಿರುವ ಮಲ್ಟಿ ಸೂಪರ್ ಸ್ಪೇಷಾಲಟಿ ಆಸ್ಪತ್ರೆ ಕಾಮಾರಿ ವೀಕ್ಷಿಸಿದರು. ‌

ಈ ವೇಳೆ ಬಿಮ್ಸ್ ಸಿಇಓ ಶಾಹಿದಾ ಆಫ್ರಿನ್, ಸಿಎಒ ಮತ್ತು ಎಫ್ ಗೌರಿಶಂಕರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ