ಹೈದರಾಬಾದ್: ಸಿಕಂದರಾಬಾದ್ ನ ಪರೇಡ್ ಮೈದಾನದ ಬಳಿ ‘40% ಕಮಿಷನ್ ಸಿಎಂಗೆ ಸುಸ್ವಾಗತ’ ಎಂಬ ಬ್ಯಾನರ್ ಹಾಕುವ ಮೂಲಕ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಇಂದು ಪರೇಡ್ ಮೈದಾನದಲ್ಲಿ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಸಮಯದಲ್ಲಿ ಈ ಬ್ಯಾನರ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸರಕಾರದ ವಿರುದ್ಧ ಗುತ್ತಿಗಾರರ ಸಂಘದ ಅಧ್ಯಕ್ಷ 40% ಕಮಿಷನ್ ಆರೋಪ ಮಾಡಿದ್ದು ದೇಶಾದ್ಯಂತ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಟೀಕೆಗೆ ಕಾರಣವಾಗಿದೆ.