ಕಳೆದ ಎರಡು ದಿನಗಳಿಂದ ವಿಜಯಪುರ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಲವು ಆವಾಂತರವನ್ನೇ ಸೃಷ್ಟಿ ಮಾಡಿದೆ, ಹಲವು ಮನೆಗಳಿಗೆ ನೀರು ನುಗ್ಗಿ ರಾತ್ರೀ ಇಡೀ ಜಾಗರಣೆ ಮಾಡುವಂತಹ ಪರಿಸ್ಥಿತಿ ಕೂಡ ಕೆಲವೆಡೆ ನಿರ್ಮಾಣವಾದರೆ ಹಲವು ಮನೆಗಳು ನೆಲಕ್ಕುರುಳಿವೆ.
ಹೌದು ಕಳೆದಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ವಿಜಯಪುರ ನಗರದಲ್ಲಿ ಹಲವು ಆವಾಂತರಕ್ಕೆ ಕಾರಣಾವಾಗಿದೆ. ನಿನ್ಮೆ ಅಂಜೆ ಸುರಿದ ಮಳೆಯಿಂದಾಗಿ ನಗರದ ಕೆ ಸಿ ಮಾರುಕಟ್ಟೆಯಲ್ಲಿ ತಳ್ಳು ಗಾಡಿ ವ್ಯಾಪಾರಸ್ಥರು ಹಾಗೂ ಹಲವು ಅಂಗಡಿಗಳಲ್ಲಿ ನೀರು ನುಗ್ಗಿ ಸಾಕಷ್ಟು ಆವಾಂತರಕ್ಕೆ ಕಾರಣವಾಗಿತ್ತು.
ಇನ್ನೂ ನಗರದ ಅಪ್ಸರಾ ಚಿತ್ರಮಂದಿರದ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳಂತೂ ಸಂಪೂರ್ಣವಾಗಿ ಜಲಾವೃತ ಗೊಂಡಿದ್ದವು. ಕಾವಿ ಪ್ಲಾಟ್ ಏರಿಯಾದಲ್ಲಿ ಹಲವು ಮನೆಗಳು ಜಲಾವೃತ ಗೊಂಡ ಪರಿಣಾಮ ತಡರಾತ್ರೀಯೇ ಶಾಸಕ ದೇವಾನಂದ ಚವ್ಹಾಣ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ನಗರದ ಅಲ್ಲಾಪುರ ತಾಂಡಾದಲ್ಲಿ ಸಹಿತ ರಾತ್ರೀ ಸುರಿದ ಮಳೆಗೆ ಹಲವು ಮನೆಗಳು ಜಲಾವೃತ ಗೊಂಡ ಪರಿಣಾಮ ದವಸ ಧಾನ್ಯ ಸಂಪೂರ್ಣವಾಗಿ ಮಳೆ ನೀರಿನಲ್ಲಿ ಹಾಳಾಗಿ ಹೊಗಿದ್ದವು.