Breaking News

ಈ ಗಣೇಶ ಮಂಡಳಿಯ ಒಂದು ತೆಂಗಿನಕಾಯಿ 2.65 ಲಕ್ಷ ರೂ.ಗೆ ಹರಾಜು!

Spread the love

ಬೆಳಗಾವಿ/ಮೂಡಲಗಿ: ಸಾರ್ವಜನಿಕ ಗಣೇಶ ಮಂಡಳಿಯ ಟೆಂಗಿನಕಾಯಿಗಳ ಹರಾಜು ಅಬ್ಬಬ್ಬಾ ಎಂದರೆ 1, 2, 5 ಸಾವಿರ ರೂ. ವರೆಗೆ ಆಗುವುದು ಸಹಜ. ಆದರೆ ಈ ಗಣಪತಿ ಎದುರು ಇಟ್ಟಿರುವ ತೆಂಗಿನಕಾಯಿ ಬರೋಬ್ಬರಿ 2.65 ಲಕ್ಷ ರೂ.ಗೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

 

ಮೂಡಲಗಿ ಪಟ್ಟಣದ ವಿಜಯ ನಗರದ ಶ್ರೀ ಗಜಾನನ ಯುವಕ ಮಂಡಳಿಯ 7ನೇ ದಿನದ ಗಣಪತಿ ವಿಸರ್ಜನೆ ವೇಳೆ ಹರಾಜು ಪ್ರಕ್ರಿಯೆ ನಡೆಯಿತು. ಗಣಪತಿ ಮೂರ್ತಿ ಎದುರು ಇಟ್ಟು ಪೂಜಿಸಲ್ಪಟ್ಟಿರುವ ಮೊದಲನೇ ತೆಂಗಿನಕಾಯಿಯನ್ನು ಹರಾಜಿಗೆ ಇಡಲಾಗಿತ್ತು. ರಾಮು ಬಾಪು ಪಾಟೀಲ ಎಂಬವರು 2.65 ಲಕ್ಷ ರೂ.ಗೆ ಆ ತೆಂಗಿನಕಾಯಿ ಹರಾಜಿನ ಮೂಲಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಐದು ಹಣ್ಣು ಹಾಗೂ ಐದು ಹಣ್ಣಿನ ತಟ್ಟೆ ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳು ಒಟ್ಟು 6.76 ಲಕ್ಷ ರೂ. ವರೆಗೆ ಹರಾಜು ಆಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಾಜು ಪ್ರತಿ ವರ್ಷವೂ ನಡೆಯುತ್ತದೆ. ಕಳೆದ ವರ್ಷವೂ ಮೊದಲನೇ ತೆಂಗಿನಕಲಾಯಿಯನ್ನು ರಾಮಾ ಪಾಟೀಲ ಅವರೇ 2.05 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದಿದ್ದರು. ಪ್ರತಿ ವರ್ಷ ರಾಮು ಅವರೇ ಮೊದಲನೇ ತೆಂಗಿನಕಾಯಿ ಪಡೆಯುತ್ತಾರೆ. ಒಟ್ಟಾರೆ 5.53 ಲಕ್ಷ ರೂ. ವರೆಗೆ ಹರಾಜು ಆಗಿತ್ತು. ಪ್ರತಿ ಸಲ 2, 3 ಲಕ್ಷ ರೂ. ಆಗುತ್ತಿದ್ದ ಹರಾಜು ಈ ಬಾರಿ ಅತಿ ಹೆಚ್ಚು ಹರಾಜು ನಡೆದಿದ್ದು ವಿಶೇಷವಾಗಿದೆ. 20 ವರ್ಷದಿಂದ ಇಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಗಣೇಶ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ