Breaking News

ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

Spread the love

ದಗ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಗದಗದ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ.

ಚಾಕು ಇರಿತಕ್ಕೆ ಒಳಗಾದ ಸುದೀಪ್ ಮುಂಡೆವಾಡಿ(22) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೇ ಹಲ್ಲೆ ಮಾಡಿ ಚಾಕು ಇರಿದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ತೀವ್ರ ರಕ್ತಸ್ರಾವದಿಂದ ಸುದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗದಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಂಗಾಕೂಟ ಸರ್ಕಲ್ ನಲ್ಲಿ ತಡರಾತ್ರಿ ಹೈಡ್ರಾಮಾ ನಡೆದಿದೆ. ಘಟನೆಯ ನಂತರ ಡಿಜೆ ಬಂದ್ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅನುಮತಿ ನೀಡಬೇಕೆಂದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ತಡರಾತ್ರಿ ಒಂದು ಗಂಟೆಯಾದ್ದು, ಡಿಜೆ ಬಂದ್ ಮಾಡಬೇಕು ಎಂದು ಪೊಲೀಸರು ಹೇಳಿದ್ದು ಅನುಮತಿ ನೀಡಬೇಕೆಂದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ನಂತರ ಡಿಜೆ ಹಾಕಿ ಮೆರವಣಿಗೆ ಮಾಡಿದ್ದಾರೆ.


Spread the love

About Laxminews 24x7

Check Also

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: ಅಭಿಮಾನಿಗಳ ಮನೆಗಳಿಗೆ ಯಶ್​ ಭೇಟಿ

Spread the love ಗದಗ: ರಾಕಿಂಗ್ ಸ್ಟಾರ್ ಯಶ್ (Rocking star Yash) ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ಊರಿನ ಬೀದಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ