ಚಿಕ್ಕೋಡಿ: ತಾನು ಪೊಲೀಸ್ ಎಂದು ನಂಬಿಸಿ ಮಹಿಳೆಯ ಬಳಿ ಇದ್ದ ಚಿನ್ನಾಭರಣ ಎಗರಿಸಿದ್ದ ಆರೋಪಿಯನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿಯ ಮಹಮ್ಮದ್ ಯೂಸುಫ್ ಇರಾನಿ ಎಂದು ಗುರುತಿಸಲಾಗಿದೆ. ಇತ್ತಿಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಿಜಯಲಕ್ಷ್ಮೀ ರಾಜು ಚೌಗಲೆ ಎಂಬ ಮಹಿಳೆಗೆ ತಾನು ಪೊಲೀಸ್ ಎಂದು ನಂಬಿಸಿ, ಬೇರೆ ಕಡೆ ಗಮನ ಸೆಳೆದು 1.5 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಸಂಜೀವ್ ಪಾಟೀಲ್ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‍ಐ ಜಿ.ಬಿ.ಕೊಂಗನೋಳಿ, ಸಿಬ್ಬಂದಿ ಬಿ.ವಿ.ಹುಲಕುಂದ, ಬಿ.ಕೆ ನಾಗನೂರ, ಎಮ್.ಎಮ್. ಕರಗುಪ್ಪಿ, ಎಮ್.ಎಮ್.ಜಂಬಗಿ, ಬಿ.ಎಸ್. ಕಪರಟ್ಟಿ ಸೇರಿದಂತೆ ಇನ್ನಿತರರನ್ನು ಒಳಗೊಂಡಿರುವ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡವು ಕಳ್ಳನ ಪತ್ತೆಗೆ ಜಾಲ ಬೀಸಿದ್ದರು.
Laxmi News 24×7